ಕೆಜಿಎಫ್ ಟೈಮ್ಸ್ ಚಾಪ್ಟರ್ 2 ನಲ್ಲಿ ರಾಕಿ ಭಾಯ್ ಕಥೆ ಏನು? ಪ್ರೀತಿ ಅಥವಾ ಅಧಿಕಾರ?

ಜನವರಿ ಎರಡನೇ ವಾರದೊಳಗೆ ಕೆಜಿಎಫ್ ಚಿತ್ರತಂಡ ಕುಂಬಳಕಾಯಿ ಹೊಡೆಯಲಿದೆ ಎಂದು ಹೇಳಲಾಗುತ್ತಿದೆ.

ಜನವರಿ 8 ರಂದು ನಟ ಯಶ್ ಅವರ ಹುಟ್ಟುಹಬ್ಬವಿದೆ. ಈ ವಿಶೇದ ದಿನ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಯಶ್ ಬರ್ತಡೇಗಾಗಿ ಅತಿ ದೊಡ್ಡ ಅಭಿಮಾನಿ ಬಳಗ ಕಾಯುತ್ತಿದೆ. ಇಂತಹ ಸಮಯದಲ್ಲಿ ಯಾರೂ ನಿರೀಕ್ಷೆ ಮಾಡದಂತಹ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ ನಿರ್ಮಾಪಕರು.
ಹೊಂಬಾಳೆ ಫಿಲಂಸ್ ವತಿಯಿಂದ ‘ಕೆಜಿಎಫ್ ಟೈಮ್ಸ್’ ಎಂಬ ಹೆಸರಿನಲ್ಲಿ ವಿಶೇಷ ಪತ್ರಿಕೆ ಪೋಸ್ಟರ್ ಅನಾವರಣಗೊಂಡಿದೆ. ರಾಕಿಭಾಯ್ ನಾಯಕನಾ ಅಥವಾ ಖಳನಾಯಕನಾ ಎಂಬ ಶೀರ್ಷಿಕೆಯಲ್ಲಿ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಖುದ್ದು ಹೊಂಬಾಳೆ ಸಂಸ್ಥೆಯ ಪತ್ರಿಕೆಯ ಮುಖಪುಟವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಕೆಜಿಎಫ್ ಸಿನಿಮಾ ವಿಚಾರದಲ್ಲಿ ನಿರ್ಮಾಪಕರು ಮಾಡುತ್ತಿರುವ ಪ್ರಚಾರದ ವಿಧಾನಕ್ಕೆ ಇಡೀ ಚಿತ್ರರಂಗ ಅಚ್ಚರಿ ಮತ್ತು ಕುತೂಹಲದಿಂದ ನೋಡುತ್ತಿದೆ.ಅಂದ್ಹಾಗೆ, ಜನವರಿ ಎರಡನೇ ವಾರದೊಳಗೆ ಕೆಜಿಎಫ್ ಚಿತ್ರತಂಡ ಕುಂಬಳಕಾಯಿ ಹೊಡೆಯಲಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ಮುಗಿಯುತ್ತಿದ್ದಂತೆ ಬಿಡುಗಡೆಗೆ ಪ್ಲಾನ್ ಮಾಡಿ ಪ್ರಚಾರ ಆರಂಭಿಸಲಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಯಶ್, ಸಂಜಯ್ ದತ್, ರವೀನಾ ಅಂಡನ್, ಪ್ರಖಾಶ್ ರಾಜ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.