ನಟನೆಯಿಂದ ದೂರ ಸರಿದ ಕನ್ನಡ ಧಾರಾವಾಹಿ ನಟಿಯರು. ಮತ್ತೆ ಏನ್ಮಾಡ್ತಿದ್ದಾರೆ

ಕಲಾವಿದರು ಕೇವಲ ನಟನೆಯನ್ನಷ್ಟೇ ಮಾಡಬೇಕಾಗಿಲ್ಲ. ಯಾರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವರಿಯಬಹುದು. ಅಂತೆಯೇ ನಟನೆಯಿಂದ ದೂರಸರಿದ ಕನ್ನಡ ಧಾರಾವಾಹಿ ಕಲಾವಿದರಿಗೆ ನಟನೆ ಜೊತೆಗೆ ಬೇರೆ ಕ್ಷೇತ್ರದ ಕಡೆಗೆ ಆಸಕ್ತಿ ಇರುತ್ತದೆ. ಕಲಾವಿದನಿಗೆ ಎಲ್ಲ ಸಮಯದಲ್ಲೂ ಒಳ್ಳೆಯ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗದು. ಅಂತೆಯೇ ಒಮ್ಮೊಮ್ಮೆ ಹಗಲು-ರಾತ್ರಿ ದುಡಿದರೂ ಕೂಡ ಸರಿಯಾದ ಸಂಭಾವನೆ ಸಮಯಕ್ಕೆ ತಕ್ಕಂತೆ ಸಿಗುವುದಿಲ್ಲ. ಕಲಾವಿದ ಬಯಸುವಂತಹ ಅವಕಾಶ ಸಿಗುವುದಿಲ್ಲ, ಅಥವಾ ಬೇರೆ ರೀತಿಯ ಸಮಸ್ಯೆಗಳು ಬರುಬಹುದು. ಹೀಗಾಗಿ ಕೆಲವರು ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದಾರೆ. ಇನ್ನೂ ಕೆಲವರು ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇದರ ಆಚೆಗೂ ಜೀವನವಿದೆ ಎಂದುಕೊಂಡು ಬೇರೆ ರಂಗದಲ್ಲಿ ಬದುಕು ಕಟ್ಟಿಕೊಂಡ ನಟ-ನಟಿಯರೂ ಸಾಕಷ್ಟು ಇದ್ದಾರೆ.

ಸ್ವಂತ ಕಂಪನಿ ಆರಂಭಿಸಿದ ಸೌಮ್ಯಾ!

ಕೆಲ ವರ್ಷಗಳ ಹಿಂದೆ ‘ಮಿಲನ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದು ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಈ ಧಾರಾವಾಹಿಯಲ್ಲಿ ಪ್ರಾರ್ಥನಾ ಪಾತ್ರದಲ್ಲಿ ನಟಿಸಿದ್ದ ನಟಿ ಸೌಮ್ಯಾ ಸದ್ಯ ಬಣ್ಣದ ಲೋಕದಿಂದ ದೂರವಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಪ್ರಸ್ತುತ ನಟಿಸುತ್ತಿಲ್ಲ. ಈ ನಡುವೆ ಅವರಿಗೆ ಮದುವೆ ಕೂಡ ಆಗಿದೆ. ನಟನೆ ಬಿಟ್ಟ ನಂತರದಲ್ಲಿ ಎಂಟು ತಿಂಗಳು ಅವರು ಮನೆಯಲ್ಲಿಯೇ ಕೂತಿದ್ದರು. ಕಾಮರ್ಸ್‌ನಲ್ಲಿ ಪದವಿ ಮಾಡಿದ್ದ ಸೌಮ್ಯಾ ಆಮೇಲೆ ಇಂಟಿರಿಯರ್ ಡಿಸೈನರ್ ಕೋರ್ಸ್ ಮಾಡಿದರು.

ಒಂದು ಕಂಪನಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ ನಂತರದಲ್ಲಿ ಅಲ್ಲಿಯೇ ಮ್ಯಾನೇಜರ್ ಲೆವೆಲ್ ಪೋಸ್ಟ್ ಕೂಡ ಸಿಕ್ಕಿತು. ಜನಕ್ಕೆ ಅವರ ಮುಖ ಸ್ವಲ್ಪ ಪರಿಚಿತವಿದ್ದಿದರಿಂದ ಕಂಪಯ ಕೆಲಸದಲ್ಲಿ ನಿರೂಪಣೆ ಮಾಡಲು ಸಹಾಯ ಆಯ್ತು. ಈಗ ಸೌಮ್ಯಾ ಅವರದ್ದೇ ಆದ ಸ್ವಂತ ಇಂಟಿರಿಯರ್ ಡಿಸೈನ್ ಕಂಪನಿ ಆರಂಭಿಸಿದ್ದಾರೆ. ಪದವಿ ಶಿಕ್ಷಣ ಮುಗಿದ ನಂತರದಲ್ಲಿ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಸೌಮ್ಯಾರಿಗೆ ಇರಲಿಲ್ಲ. ಅವರಿಗೂ ಇಮೇಲ್ ಕೂಡ ಕಳಿಸಲು ಬರುತ್ತಿರಲಿಲ್ಲವಂತೆ. ಹೀಗಾಗಿ ಎಲ್ಲವನ್ನು ಕಲಿತ ಸೌಮ್ಯಾ ಈಗ ಅವರ ಕಂಪನಿಯಲ್ಲಿಯೇ ಫುಲ್ ಬ್ಯುಸಿ. ಮುಂದಿನ ದಿನಗಳಲ್ಲಿ ಅವರು ಮತ್ತೆ ಚಿತ್ರರಂಗಕ್ಕೆ ಕಾಲಿಡಬಹುದಾದ ಸಾಧ್ಯತೆಯೂ ಕೂಡ ಇದೆ. \

ವಿದೇಶದಲ್ಲಿ ಎಚ್‌ಆರ್ ಆಗಿರುವ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!

ಮದುವೆಯಾದಮೇಲೆ ಭಾರತ ಬಿಟ್ಟು ನ್ಯೂಯಾರ್ಕ್‌ಗೆ ಬಂದ ‘ಮನೆದೇವ್ರು’ ಧಾರಾವಾಹಿ ನಟಿ ಅರ್ಚನಾ ಅಲ್ಲಿಯೇ 6 ತಿಂಗಳು ಕೆಲಸ ಹುಡುಕುತ್ತ ಸಮಯ ಕಳೆದರು. ನಟನೆಗೆ ಬರುವ ಮುನ್ನ ಖಾಸಗಿ ಕಂಪನಿಯಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಇವರು ಈಗ ವಿದೇಶದಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ನಟನೆ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡ ಸಾಕಷ್ಟು ನಟ-ನಟಿಯರು ನಮ್ಮ ನಾಡಿನಲ್ಲಿದ್ದಾರೆ. ಅನೇಕ ನಟಿಯರು ಬ್ಯೂಟಿ ಪಾರ್ಲರ್, ಬಟ್ಟೆ ಉದ್ಯಮ, ಬ್ಯೂಟಿಕ್ ಆರಂಭಿಸಿದ್ದಾರೆ. ಇನ್ನು ಕೆಲ ನಟರು ಖಾಸಗಿ ಕಂಪನಿಯಲ್ಲಿಯೋ ಅಥವಾ ಬೇರೆ ಬೇರೆ ಕ್ಲಾಸ್ ನಡೆಸಿಕೊಡುತ್ತಿದ್ದಾರೆ.