ನನ್ನನ್ನು ಈಗಲೇ ಡ್ರಗ್ ಪರೀಕ್ಷೆಗೆ ಒಳಪಡಿಸಿ ‘ಕಂಗನಾ ಸವಾಲು’

ನನ್ನನ್ನು ಈಗಲೇ ಡ್ರಗ್ ಪರೀಕ್ಷೆಗೆ ಒಳಪಡಿಸಿ ಡ್ರಗ್ ಡೀಲರ್‌ಗಳೊಂದಿಗೆ ನಾನು ನಂಟು ಹೊಂದಿರುವುದು ಸಾಬೀತಾದರೆ, ನಾನು ಮುಂಬೈ ಬಿಟ್ಟು ತೆರಳುತ್ತೇನೆ. ಹೀಗೆಂದು ಮುಂಬೈ ಪೊಲೀಸರಿಗೆ ಸವಾಲು ಹಾಕಿರುವುದು ಬಾಲಿವುಡ್ ನ ಕಂಗನಾ ರನೌತ್. ಕಂಗನಾ ಆವರ ಮಾಜಿ ಪ್ರಿಯಕರ ಆಧ್ಯಾಯನ್ ಸುಮನ್ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಕಂಗನಾ ಡ್ರಗ್ ಸೇವಿಸುತ್ತಾರೆ, ಮಾತ್ರವಲ್ಲ ನನಗೂ ಸೇವಿಸುವಂತೆ ಬಲವಂತಪಡಿಸಿದರು ಎಂದು ಹೇಳಿದ್ದರು. ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂಗನಾ, ಮುಂಬೈ ಪೊಲೀಸರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ದಯವಿಟ್ಟು ನನ್ನ ರಕ್ತದ ಮಾದರಿ ಸಂಗ್ರಹಿಸಿ, ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ದೂರವಾಣಿ ಕರೆಗಳ ವಿವರಗಳನ್ನೂ ಪಡೆದು,  ತನಿಖೆ ನಡೆಸಿ ನನಗೆ ಯಾರದರೂ ಡ್ರಗ್ ಡೀಲರ್‌ಗಳೊಂದಿಗೆ ಲಿಂಕ್ ಇರುವುದು ಸಾಬೀತು ಮಾಡಿದರೆ, ನಾನು ತಪ್ಪೋಪ್ಪಿಕೊಳ್ಳುತ್ತೇನೆ. ಮಾತ್ರವಲ್ಲ ಆ ಕ್ಷಣದಲ್ಲೇ ಮುಂಬೈ ಬಿಟ್ಟು ತೆರಳುತ್ತೇನೆ’ ಎಂದು ಹೇಳಿದ್ದಾರೆ.