“ಕಲಿಯೋ ನೀ ಕನ್ನಡ” ಉಪ್ಪಿ ಮೆಚ್ಚಿದ ಕನ್ನಡ ಆಲ್ಬಮ್

ಪ್ರಸ್ತುತ ಹೊಸ ಜೀವ ಮತ್ತು ಯುವಕರ ತಂಡವೊಂದು  ಸೇರಿ ಕಲಿಯೋ ನೀ ಕನ್ನಡ  ಎಂಬ ಹೊಸ ಕನ್ನಡ ಆಲ್ಬಮ್  ಹಾಡನ್ನು ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕದಂಬಪ್ರೊಡಕ್ಷನ್ ಹೌಸ್ ಎಂಬ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಈ ಗೀತೆಯಲ್ಲಿ ಕನ್ನಡ ಸೊಗಡು ಸಂಸ್ಕೃತಿ ಹಾಗು ಸ್ವಾಭಿಮಾನ ಎಲ್ಲವೂ ಕೂಡ ವಿಭಿನ್ನವಾದ ಶೈಲಿ  ನಮ್ಮಕಣ್ತುಂಬಿ ಪ್ರತಿ ಕನ್ನಡಿಗರ ದ್ವನಿಯಾಗಿ ಕಾಣುತ್ತದೆ 

ಈ ಹಾಡನ್ನು ವೀಕ್ಷಿಸಿದ ಕನ್ನಡ ಚಿತ್ರರಂಗದ ಖ್ಯಾತನಟ, ನಿರ್ದೇಶಕರು ಆದ Uppendra ಹಾಗು ಮಂಡ್ಯರಮೇಶ್, ಕರಿ  ಸುಬ್ಬು,  Bharath Bhopanna,  ಫೈಟ್ ಮಾಸ್ಟರ್ Mass Maada, Majabharath ಕಲಾವಿದರು ಹೀಗೆ ಹಲವಾರು ನಟರು ಮಾಧ್ಯಮ ಮಿತ್ರರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ಒಂದು ಹಾಡನ್ನು ಕರ್ನಾಟಕದ ಬಹುಭಾಗದಲ್ಲಿ ಚಿತ್ರಿಕರಿಸಿ ಸೊಗಡು, ಸಂಸ್ಕೃತಿ, ಸಾಹಿತ್ಯ ,ಹೋರಾಟದ ಬಗ್ಗೆ ವಿವರಿಸಿದ್ದಾರೆ. ಛಾಯಾಗ್ರಾಹಕರುಆದ ರಾಜು ಅವರು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ, ಹಾಗೆ ಈ ಒಂದು ಹಾಡಿಗೆ ಸಂಕಲನ ವೆಂಕಿ ಯು ಡಿ ವಿ ಅವರು ಅದನ್ನು ಅಷ್ಟೇ ಚಾಕ ಚಕ್ಕತೆಯಿಂದ ತಮ್ಮದೇ ಆದ ಶೈಲಿಯಲ್ಲಿ ಬಹಳ ಸೊಗಸಾಗಿ ಸಂಕಲನ ಮಾಡಿದ್ದಾರೆ. ಹಾಗೆ ಅವತಾರ ಮೀಡಿಯಾ ಅವರು ಮತ್ತೆ ಕರುನಾಡ ಹಳ್ಳಿಯ ಗ್ರಾಮಸ್ಥರು, ಕಲಾವಿದರು ಎಲ್ಲರೂ ಬಹಳ ಹೆಮ್ಮೆಯಿಂದ ಈ ಒಂದು ತಂಡಕ್ಕೆ ಸಹಕರಿಸಿದ್ದಾರೆ.