ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರ ಪಿ. ವಿಮಲ್ ಅವರ ಪುತ್ರ ಗೌತಮ್ ವಿ.ಪಿ ಈ ಚಿತ್ರದ ನಿರ್ದೇಶಕರು.
ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ಖೈಮರಾ ಕೂಡ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಖೈಮರಾ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಯನ್ನು ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು. ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ ಹಾಗೂ ಛಾಯಾಸಿಂಗ್ ಅವರ ಜೊತೆ ನಿರ್ಮಾಪಕ ಮತಿಯಲಗಾನ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಉಪೇಂದ್ರ ಅವರು ನಾನು ಚಿತ್ರದ ಕಥೆ ಕೇಳಿದ್ದೀನಿ. ಚಿತ್ರದ ಫಸ್ಟ್ ಲುಕ್ ಸೂಪರಾಗಿದೆ. ಚಿತ್ರವನ್ನು ಇದೇರೀತಿ ಮಾಡಿ. ಇಡೀ ತಂಡಕ್ಕೆ ಒಳೆಯದಾಗಲಿ ಎಂದು ಶುಭಕೋರಿದರು. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರ ಪಿ. ವಿಮಲ್ ಅವರ ಪುತ್ರ ಗೌತಮ್ ವಿ.ಪಿ ಈ ಚಿತ್ರದ ನಿರ್ದೇಶಕರು. ಗೌತಮ್ ಅವರ ತಾತಾ ಪೀತಾಂಭರಂ ಅವರು ಸಹ ಮೇಕಪ್ ಕಲಾವಿದರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದ್ದವರು.
ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮಾಹಿತಿ ನೀಡಿದ್ದ ನಿರ್ದೇಶಕ ಗೌತಮ್, ಖೈಮರಾ ಎಂದರೆ ಏನು ಎಂಬುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ ಎಂದರು. ನಾನು ಮಮ್ಮಿ ಚಿತ್ರದ ನಂತರ ಹಾರಾರ್ ಚಿತ್ರ ಮಾಡಿಲ್ಲ.. ನಿರ್ದೇಶಕ ಗೌತಮ್ ಅವರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯಿತು. ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಅವರೊಡನೆ ಒಟ್ಟಾಗಿ ಈ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಪ್ರಿಯಾಂಕ ಉಪೇಂದ್ರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಲವು ವರ್ಷಗಳ ನಂತರ ನಟನೆಗೆ ಮರಳಿರುವ ಛಾಯಾಸಿಂಗ್ ಅವರು ಹಲವು ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ.. ನಮ್ಮ ಪಾತ್ರದ ಬಗ್ಗೆ ಹೆಚ್ಚಾಗಿ ಹೇಳಿದರೆ, ಚಿತ್ರದ ಕಥೆ ಹೇಳಿದಂತಾಗುತ್ತದೆ. ಹಾಗಾಗಿ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರಕ್ಕೆ ಸಂಗೀತ ನೀಡುತ್ತಿರುವ ಗುರುಕಿರಣ್ ಅವರು ಮಾತನಾಡಿ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಅದಕ್ಕೆ ಹೊಂದುವ ಸಂಗೀತ ನೀಡುತ್ತೇನೆ ಹಾಗೂ ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ಚಿತ್ರಕ್ಕೆ ಇಪ್ಪತ್ತು ವರ್ಷಗಳ ನಂತರ ಸಂಗೀತ ನೀಡುತ್ತಿದ್ದೇನೆ. ಅವರು ನಟಿಸಿದ್ದ ಮೊದಲ ಚಿತ್ರ ತೆಲುಗಿನ ರಾ ಗೆ ನಾನೆ ಸಂಗೀತ ನೀಡಿದ್ದೆ ಎಂದು ನೆನಪಿಸಿಕೊಂಡರು.
ಚಿತ್ರಕ್ಕೆ ಹಣ ಹೂಡುತ್ತಿರುವ ಮತಿಯಲಗಾನ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ.
ಗೌತಮ್ ಅವರು ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ .. ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ ಹಾಗೂ ಛಾಯಾಸಿಂಗ್ ಅವರಂತಹ ಅನುಭವಿ ಕಲಾವಿದರೊಂದಿಗೆ ಅಭಿನಯಿಸುತ್ತಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾರೆ ಮತಿಯಲಗಾನ್. ಛಾಯಾಗ್ರಹಕರಾದ ವಿಷ್ಣು ರಾಮಕೃಷ್ಣನ್ ಹಾಗೂ ವಿ ಎಫ್ ಎಕ್ಸ್ ನ ಜೈ ತಮ್ಮ ಅನಿಸಿಕೆ ಹಂಚಿಕೊಂಡರು. ನವೆಂಬರ್12 ರಂದು ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಒಂದು ದಿನ ಮುಂಚಿತವಾಗಿ ಖೈಮರಾ ಚಿತ್ರತಂಡದಿಂದ ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬ ಆಚರಿಸಿ ಲೇಡಿ ಮೆಗಾ ಸೂಪರ್ ಸ್ಟಾರ್ ಎಂಬ ಬಿರುದು ನೀಡಲಾಯಿತು. ಪ್ರಿಯಾಮಣಿ ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವುದರಿಂದ ವಿಡಿಯೋ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡರು.
ಉಳಿದಂತೆ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿದೆ.

ಐದು ಭಾಷೆಗಳಲ್ಲಿ “ಪಾರಿವಾಳ” ಸಾಂಗ್, ಚಿನ್ನಿಪ್ರಕಾಶ್ ಬಿಡುಗಡೆ
ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಷಾರ್ಟ್ ಫಿಲಂ ಮೇಕಿಂಗ್ ಒಂದು ಪ್ಲಾಟ್ಫಾರಂ ಆಗುತ್ತಿದೆ. ಇದರಲ್ಲಿ ತಮ್ಮ ಪ್ರತಿಭಾವಂತಿಕೆ ತೋರಿಸಿದರೆ ಅಂಥವರಿಗೆ ಮುಂದೆ ಸಿನಿಮಾ ರಂಗದಲ್ಲಿ ಖಂಡಿತ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇತ್ತೀಚೆಗಷ್ಟೇ

ಗುರು ದೇಶ್ಪಾಂಡೆಯ ‘ಪೆಂಟಗನ್’ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ.
‘ಜಂಟಲ್ಮನ್’ ಸಿನಿಮಾ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್ಪಾಂಡೆ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಐದು ಕಥೆಗಳನ್ನ ಒಳಗೊಂಡ ‘ಪೆಂಟಗನ್’ ಚಿತ್ರವನ್ನು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸರಣಿ ಕೊಲೆಗಳ ಹಿಂದಿರುವ ರೈಮ್ಸ್ ರಹಸ್ಯ..
ನಾನು ಅಜಿತ್ರ ತಂದೆ ಜಯರಾಜ್ ಜೊತೆ ತುಂಬಾ ಕಾದಾಡಿದವನು. ನಾನು ಪೋಲೀಸ್ ಇಲಾಖೆಗೆ ಬರಲು ಒಂದು ರೀತಿ ಸಿನಮಾನೇ ಕಾರಣ. ದಶಕಗಳ ಹಿಂದೆ ಭೂಗತಲೋಕವನ್ನಾಳಿದ್ದ ಭೂಗತದೊರೆ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಈಗ

‘ಸೆಪ್ಟೆಂಬರ್ 10’ ಚಿತ್ರದ ಟೀಸರ್ ಬಿಡುಗಡೆ
ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್ ಮೊದಲಬಾರಿಗೆ ಸೋಷಿಯಲ್ ಮೆಸೇಜ್ ಇರುವ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಸೆಪ್ಟೆಂಬರ್ ೧೦ನ್ನು ವಿಶ್ವ ಆತ್ಮಹತ್ಯೆ ನಿವಾರಣಾ ದಿನವೆಂದು ಘೋಷಿಸಲಾಗಿದೆ. ಅದೇ ಹೆಸರಿನ ಚಿತ್ರವನ್ನು ಸಾಯಿಪ್ರಕಾಶ್ ಮಾಡಿದ್ದಾರೆ. ಕ್ಷುಲ್ಲುಕ

ಮೈಸೂರಿನಿಂದ ಕೇರಳಕ್ಕೆ ತೋತಾಪುರಿ
ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಇಬ್ಬರೂ ಭಾಗವಹಿಸಿದ ದೃಶ್ಯಗಳನ್ನು ಅಲಪೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ನವರಸ ನಾಯಕ ಜಗ್ಗೇಶ್, ನಿರ್ದೇಶಕ ವಿಜಯಪ್ರಸಾದ್ ನೀರ್ದೋಸೆ ಚಿತ್ರದ ನಂತರ ಮತ್ತೊಮ್ಮೆ ತೋತಾಪುರಿಯ ಮೂಲಕ ಒಂದಾಗಿದ್ದಾರೆ. ನೂರು ದಿನಗಳ ಚಿತ್ರೀಕರಣದ ಮೂಲಕ ಸುದ್ದಿಯಾಗಿದ್ದ

ಹಾಡುಗಳಲ್ಲಿ ಸ್ವಚ್ಚ ಕರ್ನಾಟಕದ ಜಪ.
ನಾವು ಇನ್ನೊಬ್ಬರನ್ನು ದೂಷಿಸುವುದಕ್ಕಿಂತ ತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರುತ್ತದೆ, ನಮ್ಮ ಊರು, ರಾಜ್ಯ, ನಮ್ಮ ದೇಶವೂ ಸ್ವಚ್ಚವಾಗಿರುತ್ತದೆ ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಚಿತ್ರದಲ್ಲಿ ಪ್ರಮುಖ