“ಕಬ್ಜ” ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಸಾತ್

ಕೋವಿಡ್ ಲಾಕ್‌ಡೌನ್‌ನಿಂದ ಸಿನಿಮಾ ಕೆಲಸಗಳು ಸ್ತಬ್ಧವಾಗಿದ್ದವು. ಈಗ ಆರಂಭವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಕುತೂಹಲ ಕೆರಳಿಸಿರುವ ಉಪೇಂದ್ರ ನಾಯಕರಾಗಿರುವ ಆರ್‌.ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರ ಬರೋಬ್ಬರಿ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ‘ಕಬ್ಜ’ ತಯಾರಾಗುತ್ತಿದೆ. ಮೊದಲಹಂತವಾಗಿ ಅಭಿಮಾನಿಗಳಿಗೆ ಒಂದುಉಡುಗೊರೆ ಕೊಡಲು ಮುಂದಾಗಿದೆ.

ಅದೇನೆಂದರೆ ಸೆಪ್ಟೆಂಬರ್‌ 18 ಉಪೇಂದ್ರ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಆರ್‌.ಚಂದ್ರು ಥೀಮ್‌ ಪೋಸ್ಟರ್‌ ಬಿಡುಗಡೆ ಮಾಡಲಿದ್ದಾರೆ. ಈ ಥೀಮ್‌ ಪೋಸ್ಟರ್‌ ಅನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ ಮಾಡಲಿದ್ದಾರೆ.

ಸೆಪ್ಟೆಂಬರ್‌ 17 ರಂದು ಸಂಜೆ 5 ಗಂಟೆಗೆ ರಾಮ್‌ ಗೋಪಾಲ್‌ ವರ್ಮಾ ಏಳು ಭಾಷೆಗಳಲ್ಲಿ ಚಿತ್ರದ ಥೀಮ್‌ ಪೋಸ್ಟರ್‌ ಬಿಡುಗಡೆ ಮಾಡಲಿದ್ದಾರೆ. ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿಬರಲಿದೆ.

ಈ ಹಿಂದೆ “ಐ ಲವ್‌ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್‌ ಇಂಡಿಯಾದತ್ತ ಮುಖ ಮಾಡಿದ್ದಾರೆ. ಸದ್ಯ ಸೆಟ್‌ವರ್ಕ್‌ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.