ಜೂ.NTR ಜೊತೆ ರಶ್ಮಿಕಾ ನಟಿಸೋದು ಪಕ್ಕಾ..?

ಟಾಲಿವುಡ್ ಖ್ಯಾತ ನಟ ಜೂ.ಎನ್.ಟಿ.ಆರ್ ಅಭಿನಯಿಸುವ ಸಿನಿಮಾದಲ್ಲಿ ಹೆಜ್ಜೆ ಹಾಕೋದಕ್ಕೆ ರೆಡಿಯಾಗ್ತಿದ್ದಾಳೆ ರಶ್ಮಿಕಾ ಮಂದಣ್ಣ.

ಟ್ರೋಲ್ ಕ್ವೀನ್, ಓವರ್ ಆಕ್ಟಿಂಗ್ ನಟಿ ಅಂತ ಪಟ್ಟ, ಬಿರುದುಗಳನ್ನ ತೆಗೆದುಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್, ಹಾಲಿವುಡ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಟ ರಕ್ಷಿತ್ ನಟಿಸಿರುವ ಕಿರಿಕ್ ಪಾರ್ಟಿ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಈಗ ಬ್ಯುಸಿ ಶೆಡ್ಯೂಲ್ ನಲ್ಲಿದ್ದಾಳೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆ ಕಾಲ್ ಶೀಟ್ ಗಾಗಿ ರಶ್ಮಿಕಾ ಅಲೆದಾಡುತ್ತಿದ್ದಳು. ಈಕೆಯ ನಸೀಬು ಚೇಂಜ್ ಮಾಡಿದ್ದೇ ಕಿರಿಕ್ ಪಾರ್ಟಿ ಸಿನಿಮಾ.. ಅವಾಗ ಹೊಡೆದ ಲಕ್ ಇನ್ನು ಆಕೆಯನ್ನ ಬಿಟ್ಟೇ ಇಲ್ಲ.. ಅಲ್ಲದೇ, ಎಷ್ಟೇ ಟ್ರೋಲ್ ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಿಕ್ಕ-ಸಿಕ್ಕಾ ಮೂವಿಗಳಲ್ಲಿ ಆಕ್ಟ್ ಮಾಡಿ ಮೂವಿಂಗ್ ಆಗುತ್ತಿದ್ದಾಳೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಸರಿಲೇರು ನೀಕ್ಕೆವ್ವರು ಎಂಬ ಮೂವಿ ನಟಿಸಿದ್ದ ರಶ್ಮಿಕಾ ಫುಲ್ ಮಿಂಚಿದ್ದಳು. ಇನ್ನು ಸ್ಯಾಂಡಲ್ವುಡ್ ಪ್ರಿನ್ಸ್ ದೃವ ಸರ್ಜಾ ನಟನೆಯ ಪೊಗರು ಚಿತ್ರದಲ್ಲೂ ನಟಿಸಿದ ಟ್ರೋಲ್ ಕ್ವೀನ್ ಸಖತ್ ಸದ್ದು ಮಾಡಿದ್ದಳು. ಹೀಗೆ ಒಂದಾದರಂತೆ ಇನ್ನೊಂದು ಎಂಬಂತೆ ಸಾಲು-ಸಾಲಾಗಿ ಕಾಲ್ ಶೀಟ್ ಸಿಗುತ್ತಲೇ ಇದೆ.

ಇದೀಗ ನಟಿ ರಶ್ಮಿಕಾ ಮಂದಣ್ಣ, ಟಾಲಿವುಡ್ ಖ್ಯಾತ ನಟ ಜೂ.ಎನ್.ಟಿ.ಆರ್ ಅಭಿನಯಿಸುವ ಸಿನಿಮಾದಲ್ಲಿ ಹೆಜ್ಜೆ ಹಾಕೋದಕ್ಕೆ ರೆಡಿಯಾಗ್ತಿದ್ದಾಳೆ. ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನ ಮಾಡ್ತಿರೋ ಸಿನಿಮಾದಲ್ಲಿ ಫಿಮೇಲ್ ಲೀಡ್ ರೋಲ್ ನಲ್ಲಿ ರಶ್ಮಿಕಾ ಮಿಂಚಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಜೂನಿಯರ್ ಎನ್.ಟಿ.ಆರ್ ಕೂಡ ತ್ರಿವಿಕ್ರಮ್ ಶ್ರೀನಿವಾಸ್ ಡೈರೆಕ್ಟ್ ಮಾಡುವ ಸಿನಿಮಾದಲ್ಲಿ ನಟಿಸಿದೋಗಿ ಹೇಳಿದ್ದು, ಇದೊಂದು ಮನೋರಂಜನೆ ಸಿನಿಮಾ ಆಗಿರಲಿದೆ. 2020ರ ಏಪ್ರಿಲ್ ನಲ್ಲಿಯೇ ಈ ಮೂವಿ ಶೂಟಿಂಗ್ ಶುರುವಾಗಬೇಕಿತ್ತು, ಆದರೆ ಕೊರೊನಾ ವಕ್ಕರಿಸಿದ್ದರಿಂದ ಸಿನಿಮಾ ಶೂಟಿಂಗ್ ಮುಂದೂಡಲಾಯ್ತು.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ಡಬ್ಬಿಂಗ್ ನಲ್ಲಿ ಬ್ಯುಸಿ ಇದ್ದಾರೆ, ಇದಾದ ಬಳಿಕ ಜೂ.ಎನ್.ಟಿ.ಆರ್ ಸಿನಿಮಾದ ಅಪ್ಡೇಟ್ಸ್ ತಿಳಿಲಾಗುತ್ತೆ ಅಂತ ಚಿತ್ರತಂಡ ಹೇಳಿದೆ. ಅಲ್ಲದೇ, ಮೂಲಗಳ ಪ್ರಕಾರ, ನಟಿ ರಶ್ಮಿಕಾ ಜೂ.ಎನ್.ಟಿ.ಆರ್ ಸಿನಿಮಾಕ್ಕೆ ಸಿಗ್ನೇಚರ್ ಹಾಕಿದ್ದಾರೆ ಎನ್ನಲಾಗ್ತಿದೆ, ಶೀಘ್ರದಲ್ಲಿ ಎಲ್ಲಾ ವದಂತಿಗಳಿಗೂ ತೆರೆ ಎಳೆಯುವ ಸಾಧ್ಯತೆಯಿದೆ.. ಒಟ್ಟಾರೆ ಕನ್ನಡದಲ್ಲಿ ಮಿಂಚಿ, ಕನ್ನಡವೇ ಮಾತನಾಡಲು ಬರಲ್ಲ ಅಂತ ಜಂಬ ತೋರಿಸಿದ್ದ, ಜಂಬದ ರಾಣಿ ಸ್ಯಾಂಡಲ್ವುಡ್ ಬಿಟ್ಟು ಇನ್ನು ಎಲ್ಲಾ ಸಿನಿ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ.