ಜಾಕಿ ಚಿತ್ರಕ್ಕೆ ಈಗ ದಶಕದ ಸಂಭ್ರಮ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರಗಳ ಪೈಕಿ ‘ಜಾಕಿ’ ಚಿತ್ರ ಕೂಡ ಒಂದು. ಇಂದಿಗೂ ಅದೆಷ್ಟೋ ಅಭಿಮಾನಿಗಳ ಬಾಯಲ್ಲಿ ಹಾಡಾಗಿ ಗುನುಗುಡುವ ‘ಜಾಕಿ’ ಚಿತ್ರ ಬಿಡುಗಡೆಯಾಗಿ ಇದೇ ಅ.14ಕ್ಕೆ ಬರೋಬ್ಬರಿ ಹತ್ತು ವರ್ಷ. ಹೌದು, 2010ರ ಅ. 14ರಂದು ತೆರೆಕಂಡ ‘ಜಾಕಿ’ ಚಿತ್ರಕ್ಕೆ ಈಗ ದಶಕದ ಸಂಭ್ರಮ. ಪುನೀತ್ ರಾಜಕುಮಾರ್ ಅವರ ಸಿನಿಮಾ ಕೆರಿಯರ್‌ನ ವಿಭಿನ್ನ ಸಿನಿಮಾಗಳಲ್ಲಿ ಒಂದು. ಎಂದು ಇಂದಿಗೂ ಹೇಳಲಾಗುವ ‘ಜಾಕಿ’ ಸಿನಿಪ್ರಿಯರಿಗೆ ಭರಪೂರ ಮನರಂಜನೆ ಕೊಡುವುದರ ಜೊತೆಗೆ ಬಾಕ್ಸಾಫೀಸ್ನಲ್ಲೂ ದೊಡ್ಡ ಮಟ್ಟದ ಕಮಾಲ್ ಮಾಡಿತ್ತು. ಇದೇ ಆ. 14ಕ್ಕೆ ‘ಜಾಕಿ’ ಚಿತ್ರ ತೆರೆಕಂಡು ದಶಕದ ಹೊತ್ತಿನಲ್ಲಿರುವಾಗ ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ತೆರೆಮರೆಯಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಕೊರೊನಾ ಆತಂಕವಿರುವುದರಿಂದ, ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲೇ ‘ಜಾಕಿ’ ಯ ದಶಕದ ಸಂಭ್ರಮವನ್ನು ಆಚರಿಸಲು ಅಪ್ಪು ಫ್ಯಾನ್ಸ್ ನಿರ್ಧರಿಸಿದ್ದಾರೆ. ‘ಜಾಕಿ’ ತೆರೆಕಂಡು ಹತ್ತು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಪುನೀತ್
ಅಭಿಮಾನಿಗಳು ಸ್ಪೆಷಲ್ ಕಾಮನ್ ಡಿ.ಪಿ (ಸಿಡಿಪಿ)ಯನ್ನು ವಿನ್ಯಾಸಗೊಳಿಸಿದ್ದು ಅದನ್ನು ಅಕ್ಟೋಬರ್ 13 ರಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ‘ಜಾಕಿ’ ಚಿತ್ರಕ್ಕೆ ದುನಿಯಾ ಸೂರಿ ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದರು. ಅ.14ರಿಂದ ಜೇಮ್ಸ್ ಶೂಟಿಂಗ್: ಸದ್ಯ ಪುನೀತ್ ರಾಜ್‌ಕುಮಾರ್ ಅವರ ‘ಯುವರತ್ನದ ಹಾಡಿನ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ಅದು ಈ ವಾರಕ್ಕೆ ಮುಗಿಯಲಿದೆ. ಅದನ್ನು ಮುಗಿಸಿಕೊಂಡು ‘ಜೇಮ್ಸ್ ತಂಡ
ಸೇರಲಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.