ಐರಾವನ್ ಗೆ ಸಾಥ್ ನೀಡಿದ ಕಿಚ್ಚ ಸುದೀಪ.

ಡಿಸೆಂಬರ್ 21 ರಂದು ಟೀಸರ್ ಬಿಡುಗಡೆ.

ನಿರಂತರ ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿರುವ ಐರಾವನ್ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಬೆಂಗಳೂರು, ಮಂಗಳೂರು ಮುಂತಾದ ಕಡೆ ಸುಮಾರು 45 ದಿನಗಳ ಚಿತ್ರೀಕರಣ ನಡೆದಿದೆ. ರಾಮ್ಸ್ ರಂಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರದ ಟೀಸರ್ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಚಿತ್ರದ ನಾಯಕರಾದ ಜೆ.ಕೆ, ವಿವೇಕ್ ಮತ್ತು ನಿರ್ದೇಶಕ ರಾಮ್ಸ್ ರಂಗ ಅವರು ಇತ್ತೀಚೆಗೆ ಕಿಚ್ಚ ಸುದೀಪ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.‌

ಕಿಚ್ಚ ಸುದೀಪ ಅವರು ಚಿತ್ರದ ಬಗ್ಗೆ ಕೇಳಿ ಸಂತಸ ಪಟ್ಟು ಟೀಸರ್ ಬಿಡುಗಡೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಎಸ್.ಪ್ರದೀಪ್ ವರ್ಮ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕುಂಗ್ಫು ಚಂದ್ರು, ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ. ಜೆ ಕೆ, ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್, ವಂದನ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.