ಚಾಣಕ್ಯ ನೀತಿ ಸೂತ್ರಗಳು 2. ಚಾಣಕ್ಯ ಹೇಳಿದ ಜೀವನ ರಹಸ್ಯಗಳು

ದೇವರು ಕಲ್ಲು, ಕಟ್ಟಿಗೆ, ಮಣ್ಣಿನ
ಮೂರ್ತಿಗಳಲ್ಲಿ ಇಲ್ಲ ಅವನು ನಮ್ಮ
ಭಾವನೆಗಳಲ್ಲಿ ಯೋಚನೆಗಳಲ್ಲಿ ಇದ್ದಾನೆ.


ನಿಮ್ಮ ದೇಹ ಆರೋಗ್ಯಕರವಾಗಿರುವ ತನಕ
ಮಾತ್ರ ಸಾವು ನಿಮ್ಮಿಂದ ದೂರದಲ್ಲಿರುತ್ತದೆ.
ನಿಮ್ಮ ಆತ್ಮವನ್ನು ಸಾವಿನಿಂದ ಸಾಧ್ಯವಾದಷ್ಟು
ಸಂರಕ್ಷಿಸಿಕೊಳ್ಳಿ ಕಳೆದುಕೊಂಡ ಸಂಪತ್ತನ್ನು,
ಸ್ನೇಹಿತನನ್ನು ಮಡದಿಯನ್ನು ಮರಳಿ
ಪಡೆಯಬಹುದು. ಆದರೆ ನಮ್ಮ ಶರೀರ
ನಶಿಸಿದರೆ ಮರಳಿ ಪಡೆಯಲು ಸಾಧ್ಯವಿಲ್ಲ…

ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು.
ಮುಂದೆ ಬರುವುದಕ್ಕಾಗಿ ಬಾಯ್ದೆರೆದು ಕೂಡಬಾರದು
ಸದ್ಯಕ್ಕಿರುವುದನ್ನು ಸರಿಯಾಗಿ ಮಾಡಬೇಕು….

ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ
ಕೇಳಿಸಿಕೊಳ್ಳುತ್ತಾನೆಯೋ ಅವನು ಈಡೀ ಜಗದ
ಮೇಲೆ ವಿಜಯ ಸಾಧಿಸುತ್ತಾನೆ..

ಮೈ ಮುಖದಿಂದ ಸುಂದರವಾಗಿರುವ ಸ್ತ್ರೀ
ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡಬಲ್ಲಳು.
ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ
ಜೀವನಪೂರ್ತಿ ಸುಖ ಕೊಡುತ್ತಾಳೆ. ಮನಸ್ಸಿನಿಂದ
ಸುಂದರವಾಗಿರುವವಳನ್ನು ಮಡದಿಯಾಗಿ
ಸ್ವೀಕರಿಸುವುದು ಒಳ್ಳೆಯದು.

»»»»»» ಮುಂದುವರೆಯುವುದು