ಚಾಣಕ್ಯ ನೀತಿ ಸೂತ್ರಗಳು 1.ಜೀವನದಲ್ಲಿ ಪ್ರತಿನಿತ್ಯ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಸಮಸ್ಯೆ ಮತ್ತು ಭಯ ನಿನ್ನ ಸನಿಹ ಬಂದು
ನಿನ್ನ ಮೇಲೆ ದಾಳಿ ಮಾಡಿ ನಿನ್ನನ್ನು ಸಾಯಿಸುವ
ಮಂಚೆಯೇ ನೀನು ಅವುಗಳನ್ನು ಸಾಯಿಸು…

ಒಬ್ಬ ಕೆಲಸಗಾರನನ್ನು ಅವನು ರಜೆಯಲ್ಲಿರುವಾಗ
ಪರೀಕ್ಷಿಸಬೇಕು. ಸಂಬಂಧಿಕರನ್ನು ಮತ್ತು
ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು.
ಆದರೆ ಮಡದಿಯನ್ನು ಮನೆಯಲ್ಲಿ ಬಡತನ
ಬಂದಾಗ ಪರೀಕ್ಷಿಸಬೇಕು.

ಯಾವನು ತನ್ನ ಕುಟುಂಬಕ್ಕೆ ಅತಿಯಾಗಿ
ಅಂಟಿಕೊಂಡಿರುತ್ತಾನೆಯೋ ಅವನು ಅತೀ ಹೆಚ್ಚಿನ
ಭಯ ಮತ್ತು ದುಃಖವನ್ನು ಅನುಭವಿಸುತ್ತಾನೆ.
ಈ ಅಟ್ಯಾಚ್ಮೆಂಟಗಳ ದು:ಖದ ಮೂಲಕಾರಣಗಳು
ಸಂತೋಷವಾಗಿರಬೇಕೆಂದರೆ ಅಷ್ಟಾಚಮಂಟಗಳನ್ನು
ಬಿಟ್ಟು ಬಿಡಬೇಕು.

ಮನಸ್ಸಲ್ಲಿರುವವರು ಮೈಲಿಗಟ್ಟಲೆ ದೂರದಲ್ಲಿದ್ದರೂ
ಸನಿಹದಲ್ಲೇ ಇರುತ್ತಾರೆ.ಆದರೆ ಮನಸ್ಸಿನಲ್ಲಿ ಇರದವರು ಜೊತೆಗಿದ್ದರೂ ಬಹುದೂರದಲ್ಲಿರುತ್ತಾರೆ..

ಪ್ರತಿಯೊಂದು ಸ್ನೇಹ ಸಂಬಂಧದ ಹಿಂದೆ
ಒಂದಲ್ಲ ಒಂದು ಸ್ವಾರ್ಥ ಅಡಗಿರುತ್ತದೆ.
ಸ್ವಾರ್ಥವಿಲ್ಲದ ಸ್ನೇಹವಿಲ್ಲ.
ಇದು ಸತ್ಯ…

»»»»»» ಮುಂದುವರೆಯುವುದು