ಗುರು 70 ರ ಸಂಭ್ರಮ; ಸಂಗೀತ ಸಂಪತ್ತು

-ಫೆ.20ಕ್ಕೆ. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಅದ್ದೂರಿ ಕಾರ್ಯಕ್ರಮ.
-ಗಾಯಕ, ಸಂಗೀತ ನಿರ್ದೇಶಕ ಕೆ. ಗುರುರಾಜ್ ಅವರ 70 ನೇ ಜನ್ಮದಿನದ ಪ್ರಯುಕ್ತ ‘ಸಂಗೀತ ಸಂಪತ್ತು’ ಸಮಾರಂಭ ಆಯೋಜನೆ.

ನಾಡಿನ ಖ್ಯಾತ ಗಾಯಕರು, ಚಲನಚಿತ್ರ ಸಂಗೀತ ನಿರ್ದೇಶಕರು ಹಾಗೂ ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿಗಳೂ ಆದ ಶ್ರೀ ಕೆ. ಗುರುರಾಜ್ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು 70, ಸಂಗೀತ ಸಂಪತ್ತು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕರು, ಗಾಯಕರು, ಅಬಕಾರಿ ಅಧಿಕಾರಿಗಳು (ನಿ) ಮತ್ತು ಸಮಾರಂಭದ ಪ್ರಧಾನ ಸಂಚಾಲಕರಾಗಿರುವ ವೆಂಕಟೇಶಮೂರ್ತಿ ಶಿರೂರ ಅವರು ಅದ್ದೂರಿ ಕಾರ್ಯಕ್ರಮವನ್ನು ಚಾಮರಾಜಪೇಟೆಯ ಸಿನಿಮಾ ಕಲಾವಿದರ ಸಂಘದ ಡಾ॥ ರಾಜ್ಕುಮಾರ್ ಕಲಾಭವನದಲ್ಲಿ ಫೆ. 20ರ ಶನಿವಾರ ಸಂಜೆ 5 ಗಂಟೆಗೆ ಗುರುರಾಜ್ ಅವರ ಕುಟುಂಬದ ಸದಸ್ಯರು, ಸ್ನೇಹಿತರು, ಶಿಷ್ಯರು ಹಾಗೂ ಅಭಿಮಾನಿಗಳನ್ನು ಸಂಘಟಿಸಿ ಆಯೋಜನೆ ಮಾಡಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಚಂದನವನದ ಹಿರಿಯ ನಟ ಪ್ರಣಯರಾಜ ಶ್ರೀನಾಥ್, ಶಾಸಕ ಎಂ. ಕೃಷ್ಣಪ್ಪ, ಕರ್ನಾಟಕ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಗಾಯಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ನಟಿ ವಿನಯಾ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಹರಿ ವೇಲು, ಡಾ, ವೆಂಕಟರಮಣ, ಚಿತ್ರ ನಿರ್ದೇಶಕ ಮುರಳಿಕೃಷ್ಣ ದೂರದರ್ಶನ ಕಾರ್ಯಕ್ರಮ ನಿರ್ವಾಹಕ(ನಿ) ಐ.ಡಿ ಹಳ್ಳಿ ರಘು ಅವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ

ಕೆ. ಗುರುರಾಜ್ ಅವರ ಸಂಗೀತದ ಪಯಣದ ಹಾದಿ ಇಲ್ಲಿದೆ

ಗುರುರಾಜ್ ಕೆ. (ಗುರು – ಸೌಂಡ್ ಆಫ್ ಮ್ಯೂಸಿಕ್) ಕಲ್ಯಾಣ ಕರ್ನಾಟಕ ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಜನಿಸಿ (30-12-1950) ಧಾರವಾಡದಲ್ಲಿ ಸೈನ್ಸ್ ಪದವಿಯನ್ನು ಪಡೆದು 1972ರಲ್ಲಿ ಬೆಂಗಳೂರಿಗೆ ಬಂದು ಸಂಗೀತ ಅಭ್ಯಾಸ ಮಾಡಿದರು. ಸುಮಾರು 45 ವರ್ಷಗಳಿಂದ ಲಘು ಸಂಗೀತದ ಕ್ಷೇತ್ರದಲ್ಲಿ (ಸಿನಿಮಾ-ಸುಗಮ-ಜಾನಪದ) ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ಸಂಗೀತ ಸಂಸ್ಥೆಗಳ ಸಂಸ್ಥಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುರಾಜ್ 1976ರಿಂದ ಲಘು ಸಂಗೀತದ ಪರಿಣಿತಿ ಹೊಂದಿ, ವಾದ್ಯಗೋಷ್ಠಿ (ಸೌಂಡ್ ಆಫ್ ಮ್ಯೂಸಿಕ್) ತಂಡವನ್ನು ಕಟ್ಟಿ, ದೇಶ ವಿದೇಶಗಳಲ್ಲಿ ಅಮೆರಿಕಾ, ಕೆನಡಾ, ಯುಎಇ, ಮಲೆಷಿಯಾ, ಸಿಂಗಾಪುರ ಸೇರಿ ಹಲವೆಡೆ 9000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೂ ಅಲ್ಲದೆ, ಅನೇಕ ಪ್ರತಿಭಾವಂತರಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಉದಯ ಟಿ.ವಿ. ಯ ಕುಹೂ ಕುಹೂ, ದೂರದರ್ಶನದ ಮಧುರ ಮಧರವೀ ಮಂಜುಳಗಾನ ಕಾರ್ಯಕ್ರಮ, ಮತ್ತು ಅನೇಕ ವಾಹಿನಿಗಳಲ್ಲಿ ರಿಯಾಲಿಟಿ ಶೋ ಗಳನ್ನು ನಡೆಸಿಕೊಟ್ಟಿದ್ದಾರೆ. 1980ರ ಆಸುಪಾಸಿನಲ್ಲಿ, ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ನೆಲೆಯೂರಿದಾಗ, ಪರಿಸ್ಥಿತಿಗನುಗುಣವಾಗಿ ಬೇಕಾದ ಸ್ಥಳೀಯ ಗಾಯಕರ, ವಾದ್ಯಗಾರರ ಕೊರತೆ ನೀಗಿಸಿ ತರಬೇತಿ ನೀಡಿ, ಕನ್ನಡ ಚಿತ್ರರಂಗ ಇಲ್ಲಿಯೇ ಗಟ್ಟಿಯಾಗಿ ಉಳಿದು ಬೆಳೆಯುವಲ್ಲಿ ಅಳಿಲು ಸೇವೆ ಸಲ್ಲಿಸಲಾಗಿದೆ.

ನೂರಾರು ಶ್ರವ್ಯದೃಶ್ಯ ಸಾಂಧ್ರಿಕೆಗಳ ಮೂಲಕ ನಾಡಿನ ಜಾನಪದ – ಸುಗಮ – ಲಘು ಸಂಗೀತ ಸಿರಿವಂತಿಕೆಯನ್ನು ಪರಿಚಯಿಸಿ, ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಕರೊಕೆ ಟ್ರ್ಯಾಕ್ ಪದ್ಧತಿಯನ್ನು ಸೃಷ್ಠಿಸಿ, ವಿಶ್ವದ ಯಾವುದೇ ಮೂಲೆಯಲ್ಲಿದ್ದವರು ಸುಲಲಿತವಾಗಿ ಕನ್ನಡ ಹಾಡುಗಳನ್ನು ಹಾಡುವಂತೆ ಮಾಡಿದ್ದಾರೆ.

ವಾದ್ಯಗೋಷ್ಠಿಗಳನ್ನು ಜನಪ್ರಿಯಗೊಳಿಸುವುದರೊಂದಿಗೆ, ಅನೇಕ ಕಲಾವಿದರು ವೃತ್ತಿಪರರಾಗಿ ಬೆಳೆಯಲು ಶಕ್ತಿಮೀರಿ ಪ್ರಯತ್ನಿಸಿ, ಸುಮಾರು 500 ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾಸಂಘವನ್ನು ಸಹ ಕಲಾವಿದರ ಪ್ರೋತ್ಸಾಹದೊಂದಿಗೆ ಸ್ಥಾಪಿಸಿ (1990) ಅದರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಈ ಮೂಲಕ ಸಂಘದ ಕಲಾವಿದರಿಗೆ ಅಪಘಾತ ಪರಿಹಾರವಿಮೆ ಪಾಲಿಸಿ ಹಾಗೂ ಇತರ ಸೂಕ್ತ ಸೇವೆಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

1000 ಹಳೆಯ ಕನ್ನಡ ಚಲನಚಿತ್ರಗೀತೆಗಳ ಸಾಹಿತ್ಯ ಸಂಗ್ರಹಿಸಿ ಮಧುರ ಮಧುರವೀ ಮಂಜುಳ ಗಾನ (ಭಾಗ-1 & ಭಾಗ-2) ಹಾಗೂ ವಾದ್ಯಗಾರರಿಗೆ ಅನುಕೂಲವಾಗೊ ಕನ್ನಡ ಹಾಡುಗಳ ನೊಟೇಷನ್ ಬುಕ್ ಮೆಲ್ಲುಸಿರೆ ಸವಿಗಾನ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ.

ನಾನು ಮತ್ತು ನನ್ನ ಪತ್ನಿ, ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಸಹಕಾರದೊಂದಿಗೆ ಸಾಧನಾ ಮ್ಯೂಸಿಕ್ ಸ್ಕೂಲ್ ಹುಟ್ಟು ಹಾಕಿ (1991) ಅದರೊಂದಿಗೆ ಸಾಧನಾ ಸೌಂಡ್ ಸ್ಟುಡಿಯೋ ಹೊಂದಿ, ಪ್ರಸ್ತುತ ಆಧುನಿಕ ಮಾಧ್ಯಮಗಳಿಗೆ ಬೇಕಾದ ರೀತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ, ಪ್ರಾಯೋಗಿಕ ತರಬೇತಿಯನ್ನೂ ಕೂಡ ನೀಡುತ್ತಾ ಬಂದಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ (2018), ಆರ್ಯಭಟ ಪ್ರಶಸ್ತಿ (2018) ಹಾಗೂ ಸಿದ್ಧಯ್ಯ ಪುರಾಣಿಕ್ ಪ್ರಶಸ್ತಿ ಮತ್ತು ಇತರ ಸಂಸ್ಥೆಗಳ ಪ್ರಶಸ್ತಿಗಳು ದೊರಕಿವೆ. ಕೆಂಪೇಗೌಡ ಪ್ರಶಸ್ತಿ -2018, ಆರ್ಯಭಟ ಪ್ರಶಸ್ತಿ – 2018