ಗಾಂಧಿಜಿಯವರ ತತ್ವ, ಸಿದ್ದಾಂತ ಸಾರುವ ಚಿತ್ರ ‘ಗಾಂಧಿ ಮತ್ತು ನೋಟು’

‘ಗಾಂಧಿ ಮತ್ತು ನೋಟು’

ಬಿ ಎಸ್ ಸುಧೀಂದ್ರ ಅವರ ಆಶೀರ್ವಾದಗಳೊಂದಿಗೆ, ಭಾವನ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪಿ.ಕೆ.ಮುರುಗನ್ ಅರ್ಪಿಸುವ ‘ಗಾಂಧಿ ಮತ್ತು ನೋಟು’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಇದೊಂದು ಗಾಂಧೀಜಿಯವರ ತತ್ವ,ಸಿದ್ಧಾಂತ,ಮೌಲ್ಯಗಳನ್ನು ಮಾಪನ ಮಾಡಲು ಯತ್ನಿಸುತ್ತಿರುವ ಕಥೆ. ಮಾಪನ ಅಂದರೆ ಈಗಿನ ಸಾಮಾಜಿಕ ಬದುಕಲ್ಲಿ ಜಗತ್ತು ಗಾಂಧಿಜಿಯವರನ್ನ ಹೇಗೆ ನೋಡುತ್ತಿದೆ? ಮತ್ತು ಗಾಂಧೀಜಿಯವರ ಮೌಲ್ಯಗಳು ಅದರ ಅಥ೯ ಮತ್ತು ಶಕ್ತಿಯನ್ನ ಹುಡುಕೋ ಒಂದು ಪ್ರಯತ್ನ.

ಸುಕ್ರಿ ಪಾತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್ ಅವರ ಪುತ್ರಿ.

ಕಥೆಯಲ್ಲಿ ಕಾಡಂಚಿನ ಹಳ್ಳಿಯಿಂದ ಓದಿಗಾಗಿ ನಡೆದುಬರುವ ಹುಡುಗಿ ಸುಕ್ರಿ.. ಸುಕ್ರಿಯ ಜೊತೆ ತೆರೆದುಕೊಳ್ಳುತ್ತ ಗಾಂಧೀಜಿಯನ್ನ ಆವರಿಸಿಕೊಂಡು ಹೇಗೆ ಜಗತ್ತಿಗೆ ತನ್ನ ನಿಲುವುಗಳಿಗೆ ತೋರಿಸಿಕೊಡುವಳು ಎನ್ನುವುದು ಗಾಂಧಿ ಮತ್ತು ನೋಟು ಚಿತ್ರದ ಕಥವಸ್ತು . ಸುಕ್ರಿ ಪಾತ್ರದಲ್ಲಿ ಕುಮಾರಿ ದಿವಿಜಾ ನಾಗೇಂದ್ರಪ್ರಸಾದ್ ಅಭಿನಯಿಸಿದ್ದಾರೆ. ದಿವಿಜಾ ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಅವರ ಪುತ್ರಿ. ಇವರೆ ಚಿತ್ರದ ಪಾತ್ರಧಾರಿ. ಇವರೊಂದಿಗೆ ಸಾಕಷ್ಟು ರಂಗಭೂಮಿ ಕಲಾವಿದರ ಅಭಿನಯ ಕೂಡ ಈ ಚಿತ್ರದಲ್ಲಿದೆ.

‘ಗಾಂಧಿ ಮತ್ತು ನೋಟು’ ವಿಭಿನ್ನ ಪೋಸ್ಟರ್

ಇತ್ತೀಚೆಗೆ ದಿವಿಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ವಿಭಿನ್ನ ಪೋಸ್ಟರ್ ಸಹ ಬಿಡುಗಡೆ ಮಾಡಿದೆ.
ಸುಧಾರಣಿ ಹೆಚ್ ಆರ್ ಮೇಲುಕೋಟೆ, ಹೆಚ್.ಕೆ.ವೀಣಾಪದ್ಮನಾಭ ಮತ್ತು ಮಂಜುನಾಥ್ ಬಿ.ಎನ್ ಈ ಚಿತ್ರದ ನಿರ್ಮಾಪಕರು.ಯೋಗಿ ದೇವಗಂಗೆ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ವಾಣಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ
ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನವಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.