ಫಸ್ಟ್ ಲುಕ್ ಅನಾವರಣಗೊಳಿಸಿದ ಪ್ಯಾನ್ ಇಂಡಿಯಾ ಗಮನಂ!

ಶಿವ ಕಂದುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಫಸ್ಟ್ ಲುಕ್ ಅನಾವರಣಗೊಳಿಸಿದ ಪ್ಯಾನ್ ಇಂಡಿಯಾ ಗಮನಂ!

ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಸಿನಿಮಾ ಗಮನಂ.
ಅಲಿ ಮತ್ತು ಜಾರಾ ಪಾತ್ರಗಳನ್ನು ನಿರ್ವಹಿಸಿರುವ ಶಿವ ಕಂದುಕುರಿ ಮತ್ತು ಪ್ರಿಯಾಂಕಾರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಜರ್ಸಿ ಧರಿಸಿದ ಕ್ರೀಡಾಪಟುವಾಗಿ ಶಿವ ಕಾಣಿಸಿಕೊಂಡರೆ, ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದಾರೆ.

ಗಮನಂ ಚಿತ್ರದಲ್ಲಿ ಈ ಎರಡು ಪಾತ್ರಗಳ ಬ್ಯೂಟಿಫುಲ್ ರೊಮ್ಯಾಂಟಿಕ್ ಸ್ಟೋರಿ ಪರದೆ ಮೇಲೆ ಅನಾವರಣಗೊಳ್ಳಲಿರುವ ಸೂಚನೆಯನ್ನು ಈ ಫಸ್ಟ್ ಲುಕ್ ನೀಡಿದೆ. ಗಮನಂ ಚಿತ್ರತಂಡ ಈ ಹಿಂದೆ ಶ್ರೀಯಾ ಶರಣ್ ಮತ್ತು ನಿತ್ಯಾ ಮೆನನ್ ಅವರ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿ ಅತ್ಯದ್ಭುತ ಪ್ರತಿಕ್ರಿಯೆ ಪಡೆದಿತ್ತು. ಈಗ ಶಿವ ಕಂದುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಅವರ ಪೋಸ್ಟರ್ ಕೂಡಾ ಎಲ್ಲರನ್ನೂ ಸೆಳೆಯುವಂತಿದೆ.

ನಾಲ್ಕು ಭಾಷೆಗಳಲ್ಲಿ ರೂಪುಗೊಂಡಿರುವ ಈ ಚಿತ್ರ ಜಗತ್ತಿನ ಯಾವುದೇ ಭಾಗದ ಜನ ನೋಡುವಂತಾ ಕಥಾಹಂದರವನ್ನು ಹೊಂದಿದೆ. ಅದರಲ್ಲೂ ಭಾರತದ ಪ್ರತಿಯೊಬ್ಬ ಪ್ರೇಕ್ಷಕ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಈ ಚಿತ್ರದ ಕಥೆ, ಪಾತ್ರಗಳೊಂದಿಗೆ ಕನೆಕ್ಟ್ ಆಗುವಂತಾ ಕಂಟೆಂಟ್ ಇದರಲ್ಲಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ. ಶ್ರಿಯಾ ಶರಣ್, ನಿತ್ಯಾ ಮೆನನ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ನಟಿಸಿದ್ದಾರೆ. ಗಮನಂ ಚಿತ್ರದಲ್ಲಿನ ನಟ-ನಟಿಯರು ಮತ್ತಿತರ ವಿವರಗಳು ಸದ್ಯದಲ್ಲೇ ಬಹಿರಂಗಗೊಳ್ಳಲಿದೆ. ಸಂಗೀತ ಜ್ಞಾನಿ ಇಳಯರಾಜಾ ʻಗಮನಂʼಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ರಾಮಕೃಷ್ಣ ಅರ್ರಮ್ ಸಂಕಲನ, ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿರುವ ʻಗಮನಂʼ ಚಿತ್ರವನ್ನು ರಮೇಶ್ ಕರುತೂರಿ ಮತ್ತು ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಸುಜನಾ ರಾವ್ ಕಥೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.