“ಮಾರಿಗುಡ್ಡದ ಗಡ್ಡಧಾರಿಗಳು” First Look Poster Release

ಕನ್ನಡ ಚಿತ್ರರಂಗದಲ್ಲಿ ಜಾಹೀರಾತು ವಿನ್ಯಾಸಕರಾಗಿ ಕೆಲಸ ಮಾಡಿರುವ ರಾಜೀವ್ ಅವರು ಈಗ ಚಿತ್ರ ನಿರ್ದೇಶಕನಾಗುವ ಮೂಲಕ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈಗ ಕೆಲ ಆತ್ಮೀಯ ಸ್ನೇಹಿತರ ಜೊತೆಗೂಡಿ ತನ್ನ ನಿರ್ದೇಶನದ ಮೊದಲ ಸಿನಿಮಾವನ್ನು ಆರಂಭಿಸುತ್ತಿದ್ದಾರೆ.

ಈ ಹಿಂದೆ “ಅಯ್ಯೋರಾಮ” ಎಂಬ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ತ್ರಿವಿಕ್ರಮ್ ರಘು ಅವರು ರಾಜೀವ್ ಅವರಿಗೆ ಸಾಥ್ ಕೊಡಲು ಮುಂದೆ ಬಂದಿದ್ದಾರೆ. ಇವರ ಜೊತೆ ಪ್ರಸನ್ನ ಪಾಟೀಲ್ ಹಾಗೂ ಅಶೋಕ್ ಇಳಂತಿಲ ಕೂಡ ಬಂಡವಾಳ ಹಾಕುತ್ತಿದ್ದಾರೆ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಹೆಸರು “ಮಾರಿಗುಡ್ಡದ ಗಡ್ಡಧಾರಿಗಳು” ಒನ್ ಶ್ರೀ ಕೃಪೆ ಬ್ಯಾನರ್ ಅಡಿಯಲ್ಲಿ ಈ ಮೂವರು ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಾರಿಗುಡ್ಡದ ಗಡ್ಡಧಾರಿಗಳು ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆಯಲಿದ್ದು. ಇಂದು ನಿರ್ದೇಶಕರಾದ ವಿಜಯ್ ಪ್ರಸಾದ್ ಚಿತ್ರದ First Look Poster Release ಮಾಡಿ ಚಿತ್ರ ತಂಡಕ್ಕೆ ಶುಭಹಾರೈಸಿದರು.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.