ಫಿಲಿಂಶಾಪ್‌ರಿಂದ ವಿಶೇಷ ಕಿರುಚಿತ್ರೋತ್ಸವ

ಫಿಲಿಂಶಾಪ್‌ರಿಂದ ವಿಶೇಷ ಕಿರುಚಿತ್ರೋತ್ಸವ

ಹಿರಿಯ ನಿರ್ದೇಶಕ,ನಿರ್ಮಾಪಕ ಬಿ.ಅರ್.ಕೇಶವ್ ಹುಟ್ಟು ಹಾಕಿರುವ ಫಿಲಿಂಶಾಪ್ ಕನ್ನಡ ಓಟಿಟಿ ಫ್ಲಾಟ್‌ಫಾರಂದಲ್ಲಿ ಪ್ರಥಮ ಹೆಜ್ಜೆ ಎನ್ನುವಂತೆ ಹೊಸಬರಿಗೆ ವೇದಿಕೆ ಸೃಷ್ಟಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಿರುಚಿತ್ರೋತ್ಸವ ಸ್ಪರ್ಧೆ ಏರ್ಪಡಿಸಿದ್ದಾರೆ. ಇದರಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕನ್ನಡ ನೆಲ,ಜಲದ ಬಗ್ಗೆ, ಕನ್ನಡಕ್ಕಾಗಿ ಹೋರಾಟ ಮಾಡಿದವರ, ಕನ್ನಡ ಸಾಹಿತ್ಯ, ಚಲನಚಿತ್ರ, ಕರ್ನಾಟಕ ಹಿರಿಮೆ ಸಾರುವ ವಿಷಯದ ಬಗ್ಗೆ ಕನಿಷ್ಟ 8 ರಿಂದ ಗರಿಷ್ಟ 10 ನಿಮಿಷದ ವರೆಗಿನ ಕಿರುಚಿತ್ರ ಸಿದ್ದಪಡಿಸಬೇಕು.
ಚಿತ್ರವು ಸಂಪೂರ್ಣ ಎಚ್‌ಡಿ ಫಾರ್ಮಾಟ್‌ನಲ್ಲಿದ್ದು, ಬೇರೆ ಯಾವುದೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರಬಾರದು. ಅಕ್ಟೋಬರ್ 31 ಕೊನೆ ದಿನಾಂಕವಾಗಿರುತ್ತದೆ. ಜನಗಳ ಮತ ಹಾಗೂ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಪ್ರಥಮ ಬಹುಮಾನ ರೂ.25000, ದ್ವಿತೀಯ 15000 ಹಾಗೂ ತೃತೀಯ ರೂ.10000, ಅರ್ಹತಾ ಪತ್ರ ಜೊತೆಗೆ ಇನ್ನಿತರ ಬಳವಳಿ ನೀಡಲಾಗುತ್ತದೆ. ವಿಜೇತರನ್ನು ಚಿತ್ರೋದ್ಯಮದ ಪ್ರತಿಷ್ಠಿತ ಗಣ್ಯರಿಂದ ಕೋವಿಡ್-19 ನಿಯಮಾನುಸಾರ ಬಹುಮಾನ ವಿತರಣೆ ಮಾಡಲಾಗುವುದು. ನವಂಬರ್ 1ರಿಂದ 29ರ ವರೆಗೆ ಚಿತ್ರೋತ್ಸವ ನಡೆಯಲಿದ್ದು, 30ರಂದು ವಿಜೇತರನ್ನು ಘೋಷಿಸಲಾಗುವುದು. ಕಿರುಚಿತ್ರವನ್ನು ನಿಮ್ಮ ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಿ ನಂತರ ಅದರ ಲಿಂಕ್‌ದಲ್ಲಿ ಚಿತ್ರದ ಪೂರ್ಣಮಾಹಿತಿ ಹಾಗೂ ಸ್ವವಿವರವನ್ನು filmshoppott@gmail.com ಮೈಲ್‌ಗೆ ಕಳುಹಿಸತಕ್ಕದ್ದು.