‘ಪೊಗರು’ ನಂತರ ‘ದುಬಾರಿ’ಯಾದ ದ್ರುವ ಸರ್ಜಾರ ನೆಕ್ಸ್ಟ್ ಪ್ರಾಜೆಕ್ಟ್!

ದ್ರುವ-ಪುರಿ ಜೊತೆ ಮಾತು ಕತೆ ಕಂಪ್ಲೀಟ್ ಸದ್ಯದಲ್ಲೇ ಆಗುತ್ತೆ ಅಧಿಕೃತ ಘೋಷಣೆ ಇನ್ನು ಈಗಾಗಲೇ ಧ್ರುವ ಸರ್ಜಾ ಮತ್ತು ಪುರಿ ಜಗನ್ನಾಥ್ ನಡುವೆ ಮಾತುಕತೆಯಾಗಿದ್ದು, ಧ್ರುವ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ಸದ್ಯ ಪೊಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ರಾಜ್ಯಾದ್ಯಂತ ದ್ರುವ ಸರ್ಜಾ ನಟೋರಿಯಸ್ ಆಗಿ ಅಬ್ಬರಿಸ್ತಿದ್ದಾರೆ. 50 ದಿನಗಳ ಹತ್ತಿರ ಪೊಗರು ಯಶಸ್ವಿಯಾಗಿ ಮುನ್ನುಗ್ತಿದೆ. ಇತ್ತೀಚೆಗಷ್ಟೇ ಪೊಗರು ನಂತರ ದ್ರುವ ಸರ್ಜಾರ ಮುಂದಿನ ಸಿನಿಮಾ ದುಬಾರಿ ಅನೌನ್ಸ್ ಆಗಿತ್ತು. ದುಬಾರಿಯಾಗಿರೋ ಆ್ಯಕ್ಷನ್ ಪ್ರಿನ್ಸ್ನ ಮತ್ತೊಂದು ಬಿಗ್ ಸಿನಿಮಾದ ಬಗ್ಗೆ ಹಾಟ್ ನ್ಯೂಸ್ ಹೊರ ಬಿದ್ದಿದೆ. ಟಿಟೌನ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ದ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತುಗಳು ಸಿನಿ ಸರ್ಕಲ್ನಲ್ಲಿ ರೌಂಡ್ ಹೊಡೀತಿವೆ. ಸ್ಯಾಂಡಲ್ವುಡ್ನಲ್ಲೂ ಅಪ್ಪು, ರೋಗ್ನಂತಹ ಸಿನಿಮಾಗಳನ್ನ ಮಾಡಿ ಸೂಪರ್ ಹಿಟ್ ಭಾರಿಸಿರುವ ಪುರಿ ಜಗನ್ನಾಥ್ ಟಾಲಿವುಡ್ನಲ್ಲಿ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್. ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ರಂತಹ ಸ್ಟಾರ್ಗಳಿಗೆ ಬೇರೆಯದ್ದೇ ಇಮೇಜ್ ತಂದು ಕೊಟ್ಟ ಸ್ಟಾರ್ ಡೈರೆಕ್ಟರ್. ಈ ನಿರ್ದೇಶಕ ಈಗ ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ರ ಮುಂದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ದ್ರುವ-ಪುರಿ ಜೊತೆ ಮಾತು ಕತೆ ಕಂಪ್ಲೀಟ್ ಸದ್ಯದಲ್ಲೇ ಆಗುತ್ತೆ ಅಧಿಕೃತ ಘೋಷಣೆ ಇನ್ನು ಈಗಾಗಲೇ ಧ್ರುವ ಸರ್ಜಾ ಮತ್ತು ಪುರಿ ಜಗನ್ನಾಥ್ ನಡುವೆ ಮಾತುಕತೆಯಾಗಿದ್ದು, ಧ್ರುವ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಕಥೆ ಬಗ್ಗೆ, ಸಿನಿಮಾದ ತಯಾರಿ ಬಗ್ಗೆ ದ್ರುವ ಮತ್ತು ಪುರಿ ಚರ್ಚೆ ನಡೆಸಿದ್ದಾರಂತೆ. ಒಂದು ಸುತ್ತಿನ ಮಾತುಕತೆಯಲ್ಲಿ ಈ ಇಬ್ಬ ಕಾಂಬಿನೇಷನ್ನ ಸಿನಿಮಾ ಬರೋದು ಪಕ್ಕಾ ಅಂತಿವೆ ಟಿಟೌನ್ ಮೂಲಗಳು. ಇನ್ನು ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದ್ದು, ಅದ್ದೂರಿ ಹುಡುಗನ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಮಾಸ್ + ಕ್ಲಾಸ್, ಲವ್ ಸ್ಟೋರಿ, ಸ್ಟೈಲಿಷ್, ರೌಡಿಸಂ ಜಾನರ್ ಸಿನಿಮಾಗಳಿಂದ ಟಾಲಿವುಡ್ನಲ್ಲಿ ತನ್ನದೇ ಆದ ಫ್ಯಾನಿಸಂ ಹೊಂದಿರೋ ನಿರ್ದೇಶಕ ಪುರಿ ಜಗನ್ನಾಥ್. ಇತ್ತ ಮೂರೇ ಸಿನಿಮಾಗಳು ಮಾಡಿದ್ರೂ ಬಿಗ್ ಸ್ಟಾರ್ಗಳ ಲಿಸ್ಟಲ್ಲಿ ಮಿಂಚುತ್ತಿರೋ ನಟ ದ್ರುವ ಸರ್ಜಾ. ಸಿನಿಮಾಗಾಗಿ ಅವರ ಡೆಡಿಕೇಷನ್ ಎಷ್ಟಿರುತ್ತೆ ಅನ್ನೋದು ಪೊಗರು ಮೂಲಕ ಪ್ರೂವ್ ಆಗಿದೆ. ಈ ಇಬ್ಬರ ಕಾಂಬಿನೇಷನ್ನಲ್ಲಿ ತಯಾರಾಗ್ತಿರೋ ಸಿನಿಮಾ ಅಂದ್ರೆ ಪಕ್ಕಾ ಅದು ಔಟ್ ಆ್ಯಂಡ್ ಔಟ್ ಮ್ಯಾಸಿವ್ ಸಿನಿಮಾ ಎನ್ನಲಾಗ್ತಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳ್ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸದ್ಯ ಇತ್ತ ದ್ರುವ ಸರ್ಜಾ ನಂದ ಕಿಶೋರ್ ನಿರ್ದೇಶನ ದುಬಾರಿ ಸಿನಿಮಾದಲ್ಲಿ ಬ್ಯುಜಿಯಾಗಿದ್ರೆ, ಅತ್ತ ವಿಜಯ್ ದೇವರ ಕೊಂಡ ಜೊತೆ ಪುರಿ ಜಗನ್ನಾಥ್ ಬ್ಯುಜಿಯಾಗಿದ್ದಾರೆ. ಈ ಮಧ್ಯೆ ಶೀಘ್ಷದಲ್ಲೇ ಈ ಇಬ್ಬರ ಕಾಂಬಿನೇಷನ್ನ ಸಿನಿಮಾ ಸೆಟ್ಟೇರಲಿದೆ.