ಡ್ರಗ್ ಹಗರಣದ ಜಾಲದಲ್ಲಿ ಅಭಿಷೇಕ್ ಗೀತಾ ಭಟ್.

ಸ್ಯಾಂಡಲ್ ವುಡ್ ಡ್ರಗ್ ಹಗರಣದ ಜಾಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯನ್ನೂ ಆವರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಆಂತರಿಕ ಭದ್ರತಾ ದಳ ಹಲವು ಕಿರುತೆರೆ ನಟ ನಟಿಯರಿಗೆ ನೋಟಿಸ್ ನೀಡಿದ್ದು, ನಟ ಅಭಿಷೇಕ್ ಮತ್ತು ನಟಿ ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ಐಎಸ್ ಡಿ ಪೊಲೀಸರು ಇತ್ತೀಚೆಗಷ್ಟೇ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. ಅವರುಗಳು ಹಲವು ಸಿನಿಮಾ ಮತ್ತು ಕಿರುತೆರೆ ನಟರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಲೂಸ್ ಮಾದ ಖ್ಯಾತಿಯ ನಟ ಯೋಗಿಶ್ ಮತ್ತು ಕ್ರಿಕೆಟಿಗ ಅಯ್ಯಪ್ಪ ಅವರನ್ನು ಸೋಮವಾರ ವಿಚಾರಣೆ ನಡೆಸಲಾಗಿತ್ತು. ಇಂದು ಖಾಸಗಿ ವಾಹಿನಿಯ ಧಾರವಾಹಿ ನಟಿಯರಾದ ಅಭಿಷೇಕ್ ಮತ್ತು ಗೀತಾ ಭಟ್ ಅವರನ್ನು ಐಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ, ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಮತ್ತು ಸಂಜನಾ ಬಲಿಪಶು ಆಗಿದ್ದಾರೆ ಅಷ್ಟೇ. ಅವರನ್ನು ಮೀರಿದ ದೊಡ್ಡ ಸ್ಟಾರ್‌ಗಳು ಈ ಮಾಫಿಯಾದಲ್ಲಿ ಕೈ ಜೋಡಿಸಿದ್ದಾರೆ ಎಂಬ ಆರೋಪವೂ ಇದೆ. ಆದ್ರೆ ಇದುವರೆಗೂ ಯಾವುದೇ ಸ್ಟಾರ್ ಕಲಾವಿದರಿಗೆ ನೋಟಿಸ್ ನೀಡಿಲ್ಲ, ಅವರ ಹೆಸರು ಸಹ ಚರ್ಚೆಗೆ ಬಂದಿಲ್ಲ ಏಕೆ ಎಂಬ ಚರ್ಚೆ ಆಗ್ತಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.