ಸ್ಯಾಂಡಲ್ ವುಡ್ ಗೆ ಅಂಟಿರುವ ಡ್ರಗ್ಸ್ ಮಾಫಿಯಾ

ಡ್ರಗ್ಸ್ ಮಾಫಿಯಾಕ್ಕೂ , ಸ್ಯಾಂಡಲ್ ವುಡ್ ನಟ- ನಟಿಯರಿಗೂ ನಂಟಿದೆಅಂತ‌ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಅನಿಕಾ‌ ಹೇಳಿಕೆ‌ ಭಾರಿ ಸದ್ದು ಮಾಡುವಾಗ ಇಂದ್ರಜಿತ್ ಮಾತು ಹೊತ್ತಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೊರ ಹಾಕಿರುವ ಸ್ಟೋಟಕ ಸುದ್ದಿ ಚಿತ್ರರಂಗವನ್ನೆ ಬಿಚ್ಚಿಬೀಳಿಸಿದೆ‌. ‘ಡ್ರಗ್ಸ್ ಮಾಫಿಯಾ ದಲ್ಲಿ ಯಾರೆಲ್ಲ ನಟ- ನಟರಿದ್ದಾರೆ, ಅವರು ಹೇಗೆಲ್ಲ ಡ್ರಗ್ಸ್ ಪಡೆಯುತ್ತಾರೆ ಎಂಬುದು ನನಗ ಗೊತ್ತು. ಪೊಲೀಸರು ರಕ್ಷಣೆ ಕೊಟ್ಟರೆ ಅವೆಲ್ಲ ಮಾಹಿತಿ ಬಹಿರಂಗ ಪಡಿಸಲು ನಾನು ಸಿದ್ದ ಅಂತ ಇಂದ್ರಜಿತ್ ಲಂಕೇಶ್ ಹೇಳಿರುವುದು ತಮಾಷೆ ಮಾತಲ್ಲ. ಇಂದ್ರಜಿತ್ ಲಂಕೇಶ್ ಖಾಸಗಿ ವಾಹಿನಿಗಳಲ್ಲಿ ಕುಳಿತು ಅಂತಹದೊಂದು ಹೇಳಿಕೆ ನೀಡಿದ ನಂತರ ಭಾರೀ‌ಚರ್ಚೆ ಶುರುವಾಗಿದೆ. ಹಾಗಂತ ಯಾರೆಲ್ಲ ಇದ್ದಾರೆ? ಅವರಿಗೆ ಹೇಗೆ ಡ್ರಗ್ಸ್ ಸಿಗುತ್ತೆ? ಅವರ ಸಂಪೂರ್ಣ ವಿವರ ಏನು? ಇದ್ಯಾವುದು ಈ ತನಕ ಬಹಿರಂಗವಾಗಿಲ್ಲ. ಆದರೆ ಇದೆಲ್ಲ ಅಕ್ರಮ‌ ದಂಧೆಯ ಮಾಹಿತಿ  ಬಹಿರಂಗವಾಗಬೇಕಾದರೆ ಅದು ಅಪರಾಧ ತನಿಖಾ ದಳದಿಂದ  ಮಾತ್ರ.  ಈಗ ಅನಿಕಾ ಸೇರಿದಂತೆ ಆಕೆಯ ಸಹಚರ ರ ಡ್ರಗ್ಸ್ ಮಾಫಿಯಾ ಬಯಲಾಗಿದ್ದೇ ಅಪರಾಧ ತನಿಖಾ ದಳದ ಪೊಲೀಸರಿಂದ. ಬಹಿರಂಗವಾಗಿಯೇ ಅಂತಹದೊಂದು  ಹೇಳಿಕೆ ನೀಡುತ್ತಾರೆಂದರೆ ಇಂದ್ರಜಿತ್ ಕೂಡ ಕಣ್ಣಿಗೆ ಬಟ್ಟೆ ಕೊಂಡಿಲ್ಲ. ಅವರಿಗೂ ಸ್ಯಾಂಡಲ್ ವುಡ್ ನ‌ಒಳ ಹೊರಗು ಗೊತ್ತಿದೆ. ಹಾಗಾಗಿ ಈಗ ಸ್ಯಾಂಡಲ್ ವುಡ್ ಜತೆಗಿನ ಡ್ರಗ್ಸ್ ದಂಧೆಯ ಜಾಲ ಎಲ್ಲಿಗೆ  ಬರುತ್ತೆ, ಯಾರ ಸುತ್ತೆಲ್ಲ ತಳಕು ಹಾಕಿಕೊಂಡಿದೆ ಎನ್ನುವುದು ಕುತೂಹಲದ ಸಂಗತಿ.