ಡಾ.ವಿಷ್ಣುವರ್ಧನ್‍ ಅವರ 70ನೇ ಜಯಂತಿಯ ಸಾರ್ಥಕ ಆಚರಣೆ.

ಡಾ.ವಿಷ್ಣುವರ್ಧನ್ ಅವರಿಗೆ 70 ತುಂಬಿದ ಈ ಸಂದರ್ಭದಲ್ಲಿ ಡಾ.ವಿಷ್ಣು ಸೇನಾ ಸಮಿತಿಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಜನ್ಮದಿನಾಚರಣೆಯನ್ನು ಸಾರ್ಥಕಗೊಳಿಸಿದೆ. ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ,

1 ನಿಸ್ಸಹಾಯಕ ಕೈದಿಗಳನ್ನು ಬಂಧಮುಕ್ತಗೊಳಿಸುವುದು.

ಶಿಕ್ಷೆಯ ಅವಧಿ ಮುಗಿದಿದ್ದರೂ ಕೂಡಾ ದಂಡ ಪಾವತಿಸಲಾಗದ ಅಸಹಾಯಕ ಕೈದಿಗಳು ಅನೇಕರಿದ್ದಾರೆ. 500 ರೂ ಕೂಡಾ ಕಟ್ಟಲಾಗದೆ ವರುಷಗಟ್ಟಲೆ ಜೈಲಿನಲ್ಲಿ ಕಾಲ ಕಳೆದವರಿದ್ದಾರೆ.
ಅಂಥಹ ನಿಸ್ಸಹಾಯಕ ಬಡಕೈದಿಗಳನ್ನು ಗುರುತಿಸಿ ಅವರ ದಂಡ ಪಾವತಿಸಿ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಥಹ ಒಂಭತ್ತು ಕೈದಿಗಳನ್ನು ಗುರುತಿಸಿದ ಡಾ. ವಿಷ್ಣು ಸೇನಾ ಸಮಿತಿಯು, ಗುಲ್ಬರ್ಗದಲ್ಲಿ 7 ಜನ ಮತ್ತು ಧಾರವಾಡದಲ್ಲಿ ಇಬ್ಬರು ಹೀಗೆ ಒಟ್ಟು 9 ಕೈದಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಅವರಿಗೆ ಬಿಡುಗಡೆಯ ಭಾಗ್ಯ
ಒದಗಿಸಿದೆ. ಈ ಸಂಪೂರ್ಣ ದಂಡ ಮೊತ್ತವನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಅವರೇ ಭರಿಸಿದ್ದಾರೆ. ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದಂಥವರು ಧಾರವಾಡ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ಮೃತ್ಯುಂಜಯ ಹಿರೇಮಠ್‍ರವರು ಮತ್ತು ಗುಲ್ಬರ್ಗ ವಿಭಾಗದ ಅಧ್ಯಕ್ಷರಾದ ರವಿ ಎಂ ದೇವರಮನಿ ಅವರು.

2. ಡಾ.ವಿಷ್ಣುವರ್ಧನ್ 70ನೇ ಜಯಂತಿ ಪ್ರಯುಕ್ತ 70 ಸಾವಿರ ಸಸಿ ನೆಡುವ ಸಂಕಲ್ಪ

ಡಾ.ವಿಷ್ಣುವರ್ಧನ್ ಅವರ 70ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ 70,000 ಸಸಿಗಳನ್ನು ನೆಡುವ ಸಂಕಲ್ಪ ಮಾಡಲಾಗಿತ್ತು. ಆ ಹಾದಿಯಲ್ಲಿ ಈಗಾಗಲೇ 21,000 ಸಸಿಗಳನ್ನು ನೆಟ್ಟು ಅದರ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಸಂಬಂಧಪಟ್ಟ ವಿಭಾಗಗಳ ಪದಾಧಿಕಾರಿಗಳಿಗೆ ವಹಿಸಲಾಗಿದೆ. ಆ ನಿಟ್ಟಿನಲ್ಲಿ ಮತ್ತೊಂದು ಮಹತ್ತರವಾದ ಕಾರ್ಯಕ್ರಮವನ್ನು ಇಂದು ಕೈಗೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 1,000 ಸಸಿಗಳನ್ನು ನೆಟ್ಟು ಆ ಸ್ಥಳವನ್ನು ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ ಡಾ.ವಿಷ್ಣುವರ್ಧನ್ ಸಸ್ಯಧಾಮ ಎಂದು ನಾಮಕರಣ ಮಾಡಲಾಗಿದೆ.

3. ರಕ್ತದಾನ ಶಿಬಿರಗಳನ್ನು ಆಯೋಜಿಸುವಿಕೆ

ಈ ದಿನಗಳಲ್ಲಿ ರಾಜ್ಯದ ಎಲ್ಲೆಡೆ ರಕ್ತದ ಕೊರತೆ ಎದ್ದು ಕಾಣುತ್ತಿದೆ. ರೋನಾದ ಆಘಾತದಿಂದ ಸಾಯುವವರ ಸಂಖ್ಯೆಯ ಪ್ರಮಾಣದಲ್ಲಿ ರಕ್ತದ ಕೊರತೆಯಿಂದ ಅಸುನೀಗುವವರ ಸಂಖ್ಯೆಯೂ ಇರುವುದು ಆಘಾತಕಾರಿ ಸಂಗತಿ. ಹೀಗಾಗಿ ಡಾ.ವಿಷ್ಣು ಸೇನಾ ಸಮಿತಿಯು ರಾಜ್ಯದ ಎಲ್ಲೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸಿತ್ತು. ಅದರ ಅಂಗವಾಗಿ ಇಲ್ಲಿಯವರೆಗೆ ಸುಮಾರು 1100ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಡಾ.ವಿಷ್ಣುವರ್ಧನ್ ಅವರ ಅಪಾರ
ಅಭಿಮಾನಿ ವರ್ಗದ ಸಹಾಯದಿಂದ ಈ ಕಾರ್ಯಕ್ರಮ ಗಮನಾರ್ಹ ಮತ್ತು ಮಾದರಿ ರೀತಿಯಲ್ಲಿ ಯಶಸ್ವಿಯಾಗಿದೆ.

4. ಡಾ. ವಿಷ್ಣುವರ್ಧನ್ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಡಾ. ವಿಷ್ಣುವರ್ಧನ್ ಅವರ ಎಪ್ಪತ್ತನೇ ಜಯಂತಿಯನ್ನು ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಮತ್ತು ಹೆಮ್ಮೆಯಿಂದ ಆಚರಿಸಬೇಕೆಂಬ ಸಂಕಲ್ಪದೊಂದಿಗೆ ಡಾ. ವಿಷ್ಣು ಸೇನಾ ಸಮಿತಿಯು ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಒಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತು. ಅದರಂತೆ ಭಾರತ ಸರ್ಕಾರದ ಜನರಲ್ ಪೋಸ್ಟ್ ಆಫೀಸ್ ಅಂಚೆ ಕಚೇರಿಯ ಮೂಲಕ ಇಂದು ಡಾ.ವಿಷ್ಣು ವರ್ಧನ್ ಅವರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ. ಇದರ ಪ್ರಾಯೋಜಕತ್ವವನ್ನು ಡಾಕ್ಟರ್ ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಅವರು ಭರಿಸಿರುವುದರಿಂದ ಈ ಕಾರ್ಯಕ್ರಮವು ಸಾಧ್ಯವಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.