ಡಾ. ವಿಷ್ಣುವರ್ಧನ್ ರವರಿಗೆ ಜನ್ಮದಿನದ ಶುಭಾಶಯಗಳು.

ಬಾಲ್ಯ ಜೀವನ:

ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1950 ರಲ್ಲಿ ಜನಿಸಿದ್ದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ವಿಷ್ಣುವರ್ಧನ್ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿದಾಗ ಇವರಿಗೆ ವಿಷ್ಣುವರ್ಧನ್ ಎಂದು ಕರೆಯಲಾಗಿತ್ತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು 200 ಕ್ಕು ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.

ಸಿನಿಮಾರಂಗಕ್ಕೆ ನಡೆದು ಬಂದ ಹಾದಿ:

ವಿಷ್ಣು 1955ರಲ್ಲಿ “ಶಿವಶರಣ ನಂಬೆಯಕ್ಕ” ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು.
ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ “ಕೋಕಿಲವಾಣಿ” ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

Vishnuvardhan

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು .

ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಫಿಲಾಂಥ್ರೋಪಿ

ಸೌಹಾರ್ದತೆಯನ್ನು ಉತ್ತೇಜಿಸಲು ಮತ್ತು ಪ್ರವಾಹದಂತಹ ವಿಪತ್ತುಗಳ ಸಮಯದಲ್ಲಿ ಸಹಾಯ ಮಾಡಲು ವಿಷ್ಣುವರ್ಧನ್ ಅವರು ಸ್ನೇಹ ಲೋಕಾ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು. ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಪೀಡಿತ ಜನರಿಗೆ ಹಣ ಸಂಗ್ರಹಿಸಲು ಅವರು ‘ಪಾದಯಾತ್ರೆ’ ನಡೆಸಿದರು. ವಿಷ್ಣುವರ್ಧನ್ ಮತ್ತು ಅವರ ಪತ್ನಿ ಭಾರತಿ ಅವರು ಮಂಡ್ಯ ಜಿಲ್ಲೆಯ ಮೆಲುಕೋಟೆ ಪಟ್ಟಣವನ್ನು ದತ್ತು ತೆಗೆದುಕೊಂಡರು, ಅಲ್ಲಿ ಅವರು ನೀರಿನ ಹಸಿವಿನಿಂದ ಕೂಡಿದ ದೇವಾಲಯದ ಪಟ್ಟಣದಲ್ಲಿ ಬೋರ್‌ವೆಲ್‌ಗಳನ್ನು ಅಗೆದಿದ್ದರು. ಫಲಾನುಭವಿಗಳು ಮುಂದೆ ಬಂದು ಅದರ ಬಗ್ಗೆ ಮಾತನಾಡಿದಾಗ ಮಾತ್ರ ಅವರ ಇತರ ಅನೇಕ ದತ್ತಿ ದೇಣಿಗೆಗಳು ಬಹಿರಂಗಗೊಂಡವು. 2005 ರ ಜನವರಿಯಲ್ಲಿ, ವಿಷ್ಣುವರ್ಧನ್, ಕ್ರಿಕೆಟಿಗ ಸೈಯದ್ ಕಿರ್ಮಾನಿ ಮತ್ತು ಶಿವ್ರಾಮ್ ಬೆಂಗಳೂರಿನಲ್ಲಿ ತನ್ನ 15 ವರ್ಷಗಳ ಸಾರ್ವಜನಿಕ ಸೇವೆಯ ನೆನಪಿಗಾಗಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (ಬಿಐಒ) ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ವಾಕ್‌ಥಾನ್‌ನಲ್ಲಿ ಭಾಗವಹಿಸಿದರು. ಡಾ. ವಿಷ್ಣುವರ್ಧನ್ ಅವರಿಗೆ ನಮ್ಮ ಕನ್ನಡ ಗೋಲ್ಡ್ ಫ್ರೇಮ್ಸ್ ವತಿಯಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

1.VamshavrakshaGirish Karnad1972
2.NagarahavuPuttannn Kanagal1972
3.Seethe Alla SavithriJayalakshmi1973
4.Mane Belagida SoseShrikanth1973
5.Gandhada GudiVijay1973
6.Bhoothayana Maga AyyuSiddalingaiah1974
7.Professor HucchuRayaA.R.Vittal1974
8.Anna AthigeA.R.Vittal1974
9.DevaragudiR.Ramamurthy1975
10.Koodi BalonaA.R.Vittal1975
11.Kalla KullaK.S.R.Das1975
12.Bhagya JyothiK.S.L.Swamy1975
13.NagakanyeS.V.Rajendrasingh Babu1975
14.Onde Roop Eradu GunaA.M.Samiullah1975
15.Devaru Kotta VaraR.Ramamurthy1976
16.Hosilu Mettida HennuV.T.Thyagarajan1976
17.Makkala BhagyaK.S.L.Swamy1976
18.Bhangarada GudiK.S.R.Das1976
19.Bhayasade Bhanda BhagyaR.Ramamurthy1977
20.Sose Thanda SoubhagyaA.V.Sheshgiri Rao1977
21.NagaraholeS.V.Rajendrasingh Babu1977
22.Chinna Ninna MuddaduveA.M.Samiullah1977
23.Shrimanthana MagaluA.V.Sheshgiri Rao1977
24Sahodara SavaalK.S.R.Das1977
25.Shani PrabhavaRathnakar-Madhu1977
26.Galate SamsaraC.V.Rajendran1977
27.Kittu PuttuC.V.Rajendran1977
28.HombisilyuGeetapriya1978
29.SandharbhaGaurisundar1978
30.Kiladi KittuS.V.Rajendrasingh Babu1978
31.VamshajyothiA.Bhimsingh1978
32.Muie Ge MuieY.R.Swamy1978
33.Siritanakke SavaalT.R.Ramanna1978
34.PrathimaT.R.Ramanna1978
35.Nanna PrayaschitaUgranarasimha1978
36.Sneha SeduV.Madhusudhan Rao1978
37.Kiladi JodiS.V.Rajendrasingh Babu1978
38.Vasanth LakshmiA.V.Sheshgiri Rao1978
39.AmarnathManimurugan1978
40.Bhale HudugaT.R.Ramanna1978
41.Madhura SangamaT.P.Venugopal1978
42.Singaporalli Raja KullaC.V.Rajendran1978
43.Asadhya AliyaBhargava1979
44.Vijay VikramV.Somashekar1979
45.Naniruvude NinagagiA.V.Sheshgiri Rao1979
46.ManiniK.S.Sethumanadhavan1979
47.Nentaro Gantu KallaroA.V.Sheshgiri Rao1979
48.Nanna Rosha Nooru VarushaJoesimon1980
49.Rama ParushuramaVijay1980
50.KalingaV.Somashekar1980
51.Hanthakana SanchuB.Kishan1980
52.Makkala SainyaLakshmi1980
53.Biligiriya BanadalliSiddalingaiah1980
54.SimhajodiJoesimon1980
55.Rahasya RathriM.S.Kumar1980
56.Bhangaradha JinkeNagabharana1980
57.Driver HanumanthuK.S.L.Swamy1980
58.Mane Mane KatheRajachandra1981
59.Naaga kala BhairavaTiptur Raghu1981
60.MahaprachandaruJoesimon1981
61.Guru SishyaruBhargava1981
62.Snehitara SavaalK.S.R.Das1981
63.Avala HejjeBhargava1981
64.Preetisi NoduGeetapriya1981
65.Pedda GeddaBhargava1982
66.Sahasa SimhaJoesimon1982
67.Karmika kallanallaK.S.R.Das1982
68.Oorige UpakariJoesimon1982
69.Jimmi GalluK.S.L.Swamy1982
70.Suvarna SethuveGeetapriya1982
71.Onde GuriBhargava1982
72.Kallu Veene NudiyithuTiptur Raghu1982
73.Sididedda SahodaraJoesimon1983
74.Muthaide BhagyaChandrashekar Sharma1983
75.Gandharva GiriDhananjaya1983
76.Gandugali RamaBhargava1983
77.Chinnadantha MagaK.S.R.Das1983
78.Simha GarjaneS.V.Chandrashekar1983
79.Prachanda KullaP.S.Prakash1983
80.RudranagaManimurugan1984
81.KhaidiK.S.R.Das1984
82.Benki BirugaliTiptur Raghu1984
83.Indina RamayanaRajachandra1984
84.BhandanaS.V.Rajendrasingh Babu1984
85.Huli HejjeK.S.L.Swamy1984
86.ChanakyaV.Somashekar1984
87.AaradhaneDeepakjalraj1984
88.Madhuve Madu Tamashe NoduSathya1984
89.karthavyaK.S.R.Das1985
90.MahapurushaJoesimon1985
91.Veeradhi VeeraVijay1985
92.Nee Bareda KadambariDwarkish1985
93.Mareyada ManikyaVijay1985
94.Nanna PrathigneK.S.R.Das1985
95.Jeevana ChakraBhargava1982
96.Nee Thanda KanikeDwarkish1985
97.KarnaBhargava1986
98.KathanayakaP.Vasu1986
99.EE Jeeva NinagagiV.Somashekar1986
100.Sathya JyothiK.Rangarajan1986
101.Krishna Nee Begane BaroBhargava1986
102.MalyamaruthaRavi1986
103.PremalokaRavichandran1987
104.SaubhagyalakshmiBhargava1987
105.KarunamayiBhargava1987
106.JayasimhaP.Vasu1987
107.Aaseya BhaleRajkishore1987
108.Jeevana JyothiP.Vasu1987
109.ShubhamilanaBhargava1987
110.Sathyam Shivam SundaramK.S.R.Das1987
111.December31Manobala1988
112.Olavina AasareK.V.Jayaram1988
113.Nammora RajaBhargava1988
114.JananayakaBhargava1988
115.SuprabhathaDinesh Babu1988
116.Krishna RukminiBhargava1988
117.DadaP.Vasu1988
118.Mithileya SeetheyaruK.S.L.Swamy1988
119.Ondhagi BhaaluK.S.R.Das1989
120.Hrudhaya GeetheBhargava1989
121.RudraK.S.R.Das1989
122.DevaVijay1989
123.Doctor KrishnaPaniramachandra1989
124.ShivaShankarBhargava1990
125.Mutthina HaraS.V.RajendraSingh Babu1990
126.Mathe Hadithu KogileBhargava1990
127.Lion JagapathiraoSaiprakash1991
128.Neenu Nakkare Haalu SakkareDhore-Bhagwan1991
129.Jagadeka VeeraBhargava1991
130.Police Mathu DadaThulsi-Shyam1991
131.Rajadhi RajaBhargava1992
132.RavivarmaJoesimon1992
133.Harikeya KuriK.S.L.Swamy1992
134.Nanna ShatruBhargava1992
135.SangarshaSunil Kumar Desai1993
136.Vyshakada DinagaluKatte Ramachandra1993
137.Naanendu NimmavanePaniramachandra1993
138.Rayaru Bhandaru Mavana ManegeDwarkish1993
139.Vishnu VijayaKeshu1993
140.ManiKantana MahimeK.Shankar1993
141.NishkarshaSunilkumar Desai1994
142.Time BombJoesimon1994
143.Kunthi PutraVijay1994
144.SamratNaganna1994
145.MahakshatriyaS.V.RajendraSingh Babu1994
146.Halunda ThavaruD.RajendraBabu1995
147.KiladigaluDwarkish1995
148.Kona EdaitheBharavi1995
149.YamakinkaraPrabahakar1995
150.Mojugara SogusugaraVijay1996
151.Deerga SumangaliD.RajendraBabu1995
152.Bangarada kalasaBhargava1995
153.Thumbida ManeUmesh1995
154.KarulinakudiV.P.Sarathy1995
155.HimapathaS.V.RajendraSingh Babu1995
156.AppajiD.Rajendra Babu1996
157.Hello DadyNaganna1996
158.Karnataka SuputhraVijay1996
159.DhaniBalajisingh Babu1996
160.JeevanadhiD.RajendraBabu1996
161.Balina JyothiDwarkish1996
162.MangalasoothraBalajisingh Babu1997
163.Ellaranthalla Nanna GandaUmesh1997
164.Shruthi Hakida HejjeDwarkish1997
165.Janani Janma BhoomiBhargava1997
166.LaaliDinesh Babu1997
167.NishabdhaDinesh Babu1998
168.Yaare Neenu CheluveD.Rajendra Babu1998
169.Simhada GuriM.Narayan Rao1998
170.Hendithge HelthiniDinesh Babu1998
171.Veerappa NayakaS.Narayan1999
172.HabbaD.Rajendra Babu1999
173.SuryavamshaS.Narayan1999
174.PremotsavaDinesh Babu1999
175.SoorappaNaganna2000
176.DeepavaliDinesh Babu2000
177.Nanna Hendthi Chennagiddale.Dinesh Babu2000
178.Yajamana.Seshadri & Radha Bharathi2000
179.Diggajaru.D.Rajendra Babu2001
180.Kotigobba.Naganna2001
181.Parva.Sunil Kumar Desai2002
182.Jamindarru.S.Narayan2002
183.Simhadriya Simha.S.Narayan2002
184.Raja Narasimha.Muthyalu Subaiah2003
185.Hrudayavantha.P.Vasu2003
186.Kadamba.Suresh Krishna2004
187.Apthamitra.P.Vasu2004
188.Sahukara.Om Prakash2004
189.Jyeshta.Suresh Krishna2004
190.Varsha.S.Narayan.2005
191.Vishnu Sena.Naganna.2005
192.Nenello Nanalle.Dinesh Baboo.2006
193.Sirivantha.S.Narayan.2006
194.Ekadantha.Sachin2007
195.Mathad Mathadu Mallige.Nagathihalli Chandrashekar2007
196.Ee Bandhana.Vijaylakshmi Singh2007
197.Nam Yajamanaru.Nagabharana2009
198.Master.Dinesh Baboo2010(Released after Ballary Naga)
199.Ballary Naga.Dinesh Baboo2009
200.Aptarakshaka – Last Movie.P.Vasu2010