ಅಣ್ಣಾವ್ರರ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಸೌಭಾಗ್ಯ – ದೇವರಾಜ್

2020 ದುರದೃಷ್ಟದ ವರ್ಷ ಎಂದು ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರದಿಂದ ಮಾತನಾಡಿದರು. ನಂತರ ಡಾ.ರಾಜ್‌ಕುಮಾರ್ ಕುಟುಂಬದ 2021ನೇ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದ್ದು ಮೊದಲ ಪುಣ್ಯದ ಕೆಲಸ. ಅಣ್ಣಾವ್ರ ನಟಿಸಿರುವ ’ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಕೃಷ್ಣನ ಅವತಾರದಲ್ಲಿರುವ ಭಾವಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವು ಕ್ಯಾಲೆಂಡರ್ ಬಿಡುಗಡೆ ಮಾಡಿರೆಂದು ಹೇಳಿದರು.
ಒಟ್ಟು ಹನ್ನೆರಡು ತಿಂಗಳ ಪುಟಗಳಲ್ಲಿ ಡಾ.ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಪಾರ್ವತಮ್ಮರಾಜ್‌ಕುಮಾರ್ ಅವರನ್ನು ಡಾ.ರಾಜ್ ಕ್ಯಾಮರಾದಲ್ಲಿ ಕ್ಲಿಕ್ ಮಾಡುತ್ತಿರುವುದು, ಚಿ.ಉದಯಶಂಕರ್ ಅವರೊಂದಿಗೆ ಮಾತನಾಡುತ್ತಿವುದು, ಹ್ಯಾಟ್ರಿಕ್ ಹೀರೋ ಅಮ್ಮನಿಗೆ ಸಿಹಿ ತಿನ್ನಿಸುವಾಗ ಡಾ.ರಾಜ್ ನೋಡುತ್ತಿರುವುದು. ’ದಾರಿ ತಪ್ಪಿದ ಮಗ’ ಚಿತ್ರದ ಸ್ಟಿಲ್ ಇನ್ನು ಮುಂತಾದ ಆಕರ್ಷಕ ಭಾವಚಿತ್ರಗಳು ಇರಲಿದೆ. ’ಅಖಿಲ ಕರ್ನಾಟಕ ಡಾ.ಶಿವರಾಜ್‌ಕುಮಾರ್ ಸೇನಾ ಸಮಿತಿ’ ನೂತನ ವರ್ಷದ ಕ್ಯಾಲೆಂಡರ್‌ನ್ನು ಸಿದ್ದಪಡಿಸಿದೆ.