Dr. Rajkumar 205 Films

ಮನದಾಳದ ಮಾತು

ಆತ್ಮೀಯರೆ,
ಡಾ|| ರಾಜ್ ಕುಮಾರ್ ರವರ ಚಲನಚಿತ್ರಗಳ 100ಕ್ಕೂ ಹೆಚ್ಚು ಚಿತ್ರಗಳನ್ನು 1986ರಲ್ಲಿ ಬರೆಯಲು ಪ್ರಾರಂಭಿಸಲಾಗಿದ್ದು, ಅನಿವಾರ್ಯ ಕಾರಣಗಳಿಂದ ಉಳಿದ 28ಚಿತ್ರಗಳನ್ನು ಈ ಹೊತ್ತಿಗೆಯಲ್ಲಿ ಸೇರಿಸಲಾಗಿದೆ. ಈ ಚಿತ್ರಲೇಖನದಲ್ಲಿ 206+03 (ಗೌರವ ನಟ) ಚಲನಚಿತ್ರ ಚಿತ್ರಗಳನ್ನು ಪೆನ್ಸಿಲ್, ಪೆನ್ ಮತ್ತು ಕಲರ್‌ಗಳಲ್ಲಿ ರಚಿಸಿ ಎಲ್ಲಾ ಚಿತ್ರಗಳ ಶೀರ್ಷಿಕೆಗಳನ್ನು ಮೂಲ ವಿನ್ಯಾಸವನ್ನೇ ಆಧರಿಸಿ ಬರೆಯಲಾಗಿದೆ. ಜೊತೆಗೆ ಡಾ|| ರಾಜ್ ಜೊತೆ ನಟಿಸಿರುವ ಎಲ್ಲಾ ಪ್ರಮುಖ ನಾಯಕಿಯರನ್ನುಸೇರಿಸುವ ಪ್ರಯತ್ನ ಮಾಡಿದ್ದೇನೆ.
ಈ ಚಿತ್ರಗಳನ್ನು ಐದು ತಿಂಗಳುಗಳ ಕಾಲಾವಧಿ ತೆಗೆದುಕೊಂಡಿದ್ದು, ಪ್ರತಿ ಚಿತ್ರ ರಚನೆಗೆ ಸರಾಸರಿ ಐದು ಗಂಟೆಗಳ
ಸಮಯ ತೆಗೆದುಕೊಂಡಿರುತ್ತೇನೆ. ಅರ್ಧದಷ್ಟು ಚಿತ್ರಗಳನ್ನು Free hand ಮೆತೆಡ್‌ನಲ್ಲಿಯು, ಉಳಿದ ಅರ್ಧದಷ್ಟು ಚಿತ್ರಗಳನ್ನು ಗ್ರಾಫ್ (ಚಕ್ಕೆ) ಮೆತೆಡ್‌ನಲ್ಲಿಯು ಬರೆಯಲಾಗಿದೆ.
ನನಗೆ ಬಹುದಿನಗಳ ಆಸೆಯಾಗಿದ್ದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿದ್ದೇನೆ. ಡಾ| ರಾಜ್ ಚಿತ್ರಗಳನ್ನು
ಸಮಸ್ತ ಜನರಿಗೆ ಮರು ನೆನಪಿಸುವ ಪ್ರಯತ್ನ ಇದಾಗಿರುತ್ತದೆ. ತಾವುಗಳು ಈ ಚಿತ್ರಗಳನ್ನು ವೀಕ್ಷಿಸಿದ ನಂತರದ ತಮ್ಮ ಹೊಗಳಿಕೆಮತ್ತು ತೆಗಳಿಕೆಯನ್ನು ನಾನು ಸಮಾನಾಗಿ ಸ್ವೀಕರಿಸಲು ಸಿದ್ದನಿರುತ್ತೇನೆ. ಈ ಚಿತ್ರಗಳು ತಮಗೆ ಇಷ್ಟವಾದ ಪಕ್ಷದಲ್ಲಿ ಎಲ್ಲಾ ಡಾ|| ರಾಜ್ ಅಭಿಮಾನಿಗಳಿಗೆ, ಸ್ನೇಹಿತರಿಗೆ Share ಮಾಡುವ ಮೂಲಕ ತಲುಪಿಸಿ ಎಂದು ತಮ್ಮಲ್ಲಿ ಮನವಿಮಾಡಿಕೊಳ್ಳುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ ಧನ್ಯವಾದಗಳು.

– ನರಸಿಂಹಾಚಾರ್ A.M., ಚಿತ್ರಕಲಾ ಶಿಕ್ಷಕರು