ಪ್ರಮೋಷನಲ್ ಸಾಂಗ್ ಮೂಲಕ ಪ್ರಚಾರ ಕಣಕ್ಕಿಳಿದ “ಡಿ ಎನ್ ಎ”

ಪೂರ್ಣ ಕಮರ್ಷಿಯಲ್​ ಚಿತ್ರವಾಗಿಸದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್ಎ ಮಾಡಿದ್ದೇನೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ.

ಮಾತೃಶ್ರೀ ಎಂಟರ್​ ಪ್ರೈಸಸ್​ ಬ್ಯಾನರ್​ನಲ್ಲಿ ಸಿದ್ಧವಾಗಿದೆ ಡಿಎನ್ಎ ಚಿತ್ರ. ಈ ಚಿತ್ರದ ಪ್ರಮೋಷನಲ್ ಹಾಡಿನ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದ ರೇಣುಕಾಂಬದಲ್ಲಿ ಸೋಮವಾರ ನೆರವೇರಿದೆ. ಈಗಾಗಲೇ ಚಿತ್ರೀಕರಣ ಕೆಲಸ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿರುವ ತಂಡ, ಚಿತ್ರದ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿತು.

ಪ್ರಕಾಶ್ ರಾಜ್ ಮೇಹು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಮೈಲಾರಿ ಎಂ ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹ, ಯುಮನಾ, ಮಾಸ್ಟರ್ ಆನಂದ್ ಅವರ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಹುತಾರಾಗಣದ ಈ ಚಿತ್ರದ ಬಗ್ಗೆ ಮೊದಲಿಗೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಮಾತನಾಡಿದ್ದಾರೆ.

ಕಳೆದ 25 ವರ್ಷಗಳಿಂದ ನಾನು ಸಿನಿಮಾರಂಗದಲ್ಲಿದ್ದೇನೆ. ಹೀಗಿದ್ದರೂ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್​ ಚಿತ್ರವಾಗಿಸದೇ, ಪೂರ್ಣ ಕಮರ್ಷಿಯಲ್​ ಚಿತ್ರವಾಗಿಸದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್ಎ ಮಾಡಿದ್ದೇನೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು.

ನಾನೂ ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬ ದಿನಗಳಿಂದ ಕಾಯುತ್ತಿದ್ದೆ. ಈಗ ಡಿಎನ್ಎ ಮೂಲಕ ಗಟ್ಟಿ ಕಥೆಯೊಂದಿಗೆ ಬಂದಿದ್ದೇನೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ‌ ನಡುವಿನ ಕಥೆ ಇದು ಎನ್ನುತ್ತಾರೆ ನಾಯಕಿ ಎಸ್ಟರ್ ನರೋನಾ. ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ.. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. ಪ್ರಮೋಷನಲ್ ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಸಿನಿಮಾ ಮಾಡುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ. ಅದನ್ನು ಡಿಎನ್ಎ ತಂಡ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು. ಇನ್ನು ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಚೇತನ್ ಕೃಷ್ಣ, ನಾಲ್ಕು ಹಾಡು, ಎರಡು ಬಿಟ್ ಇದೆ.. ರಾಜೇಶ್ ಕೃಷ್ಙ, ಅನುರಾಧಾ ಭಟ್, ಪುಟಾಣಿ ಕೃತಿ, ಮತ್ತೊಂದು ಹಾಡಿಗೆ ನಾನೇ ಧ್ವನಿ ನೀಡಿದ್ದೇನೆ ಎಂದರು .

ಚಿತ್ರದ ಬಗ್ಗೆ ಕೊನೆಗೆ ಮಾತಿಗಿಳಿದ ನಿರ್ಮಾಪಕ ಮೈಲಾರಿ ಎಂ, ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು.. ಈಗಾಗಲೇ ಸೆನ್ಸಾರ್ ಮಂಡಳಿಯವರೂ ಚಿತ್ರವನ್ನು ಮೆಚ್ಚಿ ಯು ಸರ್ಟಿಫಿಕೇಟ್ ನೀಡಿದ್ದಾರೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ತರುವ ಪ್ಲಾನ್ ಇತ್ತು. ಕೋವಿಡ್ ನಿಂದಾಗಿ ಶೇ.50 ಸೀಟು ಭರ್ತಿಗೆ ಅವಕಾಶ ಇರುವುದರಿಂದ ಸದ್ಯಕ್ಕೆ ಬಿಡುಗಡೆ ಮುಂದೂಡಿದ್ದೇವೆ ಎಂಬುದು ಅವರ ಮಾತು. ಚಿತ್ರಕ್ಕೆ ಶಿವರಾಜ್‌ ಮೇಹು ಸಂಕಲನ, ರವಿಕುಮಾರ್ ಸಿನಿಮಾಟೋಗ್ರಾಫಿ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.