ಪೊಗರು ಚಿತ್ರ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಬೆನ್ನಲೇ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಜೋಡಿ ಮತ್ತೊಂದು ಚಿತ್ರಕ್ಕೆ ರೆಡಿಯಾಗಿದೆ. ಈ ಸಿನಿಮಾ ಉದಯ್ ಮೆಹ್ತಾ ನಿರ್ಮಾಣದ ಅದ್ದೂರಿವೆಚ್ಚದ ಬಿಗ್ ಬಜೆಟ್ ಸಿನಿಮಾ ಎನ್ನುವುದು ಇಲ್ಲಿನ ಇನ್ನೊಂದು ವಿಶೇಷ.
ಸರ್ಜಾ ಕುಟುಂಬಕ್ಕೆ ತುಂಬಾನೆ ಹತ್ತಿರದಲ್ಲಿರುವ ನಿರ್ಮಾಪಕ ಉದಯ್ ಕೆ.ಮೆಹ್ತಾ ಈ ಹಿಂದೆ ಚಿರು ಕಾಂಬಿನೇಷನ್ಮೂಲಕ’ ಸಿಂಗ ‘ ಚಿತ್ರ ನಿರ್ಮಿಸಿ ತೆರೆಗೆ ತಂದಿದ್ದರು. ಆಗಲೇ ಧ್ರುವ ಸರ್ಜಾ ಕಾಂಬಿನೇಷನ್ ಮೂಲಕ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದು, ಆ ಚಿತ್ರವನ್ನು ನಂದಕಿಶೋರ್ ಅವರೇ ನಿರ್ದೇಶಿಸಲಿದ್ದಾರೆಂಬ ಸುದ್ದಿ ಹರಿದಾಡಿದ್ದು ನಿಮಗೂ ಗೊತ್ತು.
ಚಿತ್ರ ತಂಡ ಸಿನಿಮಾ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಿಸಲು ಸೋಮವಾರ ಒಂದು ಪೋಸ್ಟರ್ ಬಿಟ್ಟಿದೆ. ಸದ್ಯಕ್ಕೆ ಈ ಸಿನಿಮಾಟೈಟಲ್ ಏನು ಅಂತಲೂ ಗೊತ್ತಾಗಿಲ್ಲ. ಅದರೆ ಇದು ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ. ಅದನ್ನು ಸಿಬಾಲಿಕ್ ಆಗಿ ಟೈಟಲ್ ಮೂಲಕ ಹೇಳಿ ಭರ್ಜರಿ ಕ್ರೇಜ್ ಹುಟ್ಟಿಸಲು ಸಜ್ಜಾಗಿದೆ ಚಿತ್ರ ತಂಡ. ಉಳಿದಂತೆ ಈ ಸಿನಿಮಾ ಶುರುವಾಗುವುದು ಯಾವಾಗ, ಶೂಟಿಂಗ್ ಯಾವಾಗ, ಕಥೆ ಎಂತಹದು ಎಲ್ಲವೂಈಗ ನಿಗೂಢ. ಆದರೆ ಇಂದು ಹುಟ್ಟು ಹಬ್ಬಕ್ಕೆ ಶುಭ ಕೋರಿ ಚಿತ್ರ ತಂಡ ಪೋಸ್ಟರ್ ಬಿಟ್ಟಿದೆ. ಅಲ್ಲಿಗೆ ಸಿನಿಮಾ ಇಷ್ಟರಲ್ಲಿಯೇ ಶುರುವಾಗುವುದು ಗ್ಯಾರಂಟಿ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.ಧ್ರುವಸರ್ಜಾ ರವರಿಗೆ ಜನ್ಮದಿನದ ಶುಭಾಶಯಗಳು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.