ರಜಿನಿಕಾಂತ್ ಅಳಿಯ ಧನುಷ್ ಹೀಗೆಲ್ಲಾ ಆಕ್ಟಿಂಗ್ ಮಾಡ್ತಾರಾ.

ಬ್ಲಾಕ್ ಬ್ಲಾಸ್ಟರ್ ಹಿಟ್ ಆದ ಅಸುರ್ ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಿದು, ಈ ಸಿನಿಮಾದಲ್ಲಿ ನಟ ಧನುಷ್ ವಿಭಿನ್ನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

VIP ಸಿನಿಮಾ ಮೂಲಕ ಲಕ್ಷಾಂತರ ಅಭಿಮಾನಿಗಳನ್ನ ಸಂಪಾದಿಸಿದ ಕಾಲಿವುಡ್ ನಟ ಧನುಷ್ ಮತ್ತೊಂದು ಮಹತ್ತರ ಸಾಧನೆ ಮಾಡಿ, ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಅಸುರನ್ ಸಿನಿಮಾದಲ್ಲಿ ನಟಿಸಿದ ಧನುಷ್ ಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇವರೊಟ್ಟಿಗೆ ವೆಟ್ರಿಮಾರನ್ ಕೂಡ ನ್ಯಾಷನಲ್ ಅವಾರ್ಡ್ ನ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ..
ವಿಭಿನ್ನ ರೀತಿಯಲ್ಲಿ ಮತ್ತು ವಾಸ್ತವ, ನೈಜ ಕಥೆಯನ್ನ ಹೆಣೆಯುವಲ್ಲಿ ಫುಲ್ ಫೇಮಸ್ ಆಗಿರುವ ನಿರ್ದಶಕ ವೆಟ್ರಿಮಾರನ್, ತಮ್ಮ ಗರಡಿಯಲ್ಲಿ ಮೂಡಿ ಬಂದ ಸಿನಿಮಾಗಳು ಬಿಗ್ ಹಿಟ್ ಆಗಿವೆ. ವೆಟ್ರಿಮಾರನ್ ನಿರ್ದೇಶನ ಮಾಡಿರುವ ಎರಡು ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳು ಲಭಸಿವೆ. 2011ರಲ್ಲಿ ಡೈರೆಕ್ಷನ್ ಮಾಡಿರೋ ಆಡುಕುಲಂ ಮೂವಿಗೆ ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಸಿಕ್ಕಿದರೆ, ಕಾ ಕಾ ಮುಟ್ಟೈ ಮತ್ತು ವಿಸಾರನೈ ಸಿನಿಮಾಕ್ಕೆ ಅತ್ಯುತ್ತಮ ಚಲನಚಿತ್ರ ಅವಾರ್ಡ್ ತೆಕ್ಕೆಗೆ ಬಿದ್ದಿದೆ. ಬರೋಬ್ಬರಿ ಮೂರು ರಾಷ್ಟ್ರೀಯ ಪ್ರಶಸ್ತಿ ದಕ್ಕಿಸಿಕೊಂಡ ಕೀರ್ತಿ ವೆಟ್ರಿಮಾರನ್ ಗೆ ಸೇರಿದೆ.

ಇನ್ನು ರಜಿನಿ ಕಾಂತ್ ಅಳಿಯ ಕಾಲಿವುಡ್ ಖ್ಯಾತ ನಟ,ಧನುಷ್ ಕೂಡ ರಾಷ್ಟ್ರೀಯ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಬ್ಲಾಕ್ ಬ್ಲಾಸ್ಟರ್ ಹಿಟ್ ಆದ ಅಸುರ್ ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಿದು, ಈ ಸಿನಿಮಾದಲ್ಲಿ ನಟ ಧನುಷ್ ವಿಭಿನ್ನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಧನುಷ್ ಮತ್ತು ಮಂಜು ಲೀಡ್ ರೋಲ್ ನಲ್ ಕಾಣಿಸಿಕೊಂಡಿದ್ದು, ಧನುಷ್ ಆಕ್ಟಿಂಗ್ ಗೆ ಪ್ರೇಕ್ಷಕರೇ ಫಿದಾ ಆಗಿದ್ದರು. ಇದೀಗ ಅಸುರನ್ ಗೆ ನ್ಯಾಷನಲ್ ಅವಾರ್ಡ್ ಸಿಕ್ಕಿರೋದು ಬಂಪರ್ ಲ್ಯಾಟರಿ ಹೊಡೆದಂತಾಗಿದೆ.

2019ರಲ್ಲಿ ತೆರೆಕಂಡ ಅಸುರನ್ ಸಿನಿಮಾದಲ್ಲಿ ನಟ ಧನುಷ್ ಮಧ್ಯವಯಸ್ಕರಂತೆ ಅಮೋಘವಾದ ಪಾತ್ರವನ್ನ ಮಾಡಿದ್ದಾರೆ. ಆಡುಕಲಮ್ ಸಿನಿಮಾ ಆದಮೇಲೆ ಇದು ಟಾಪ್ ಎರಡನೇ ನ್ಯಾಷನಲ್ ಅವಾರ್ಡ್ ಆಗಿದೆ. ನಟ ಧನುಷ್ ಮತ್ತು ವಿಟ್ರಮಾರನ್ ಕಾಂಬಿನೇಷನ್ ಸೂಪರ್ ಲೆವಲ್ ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಮೂವಿ ದೇಶಾದ್ಯಂತ ಸಖತ್ ಸದ್ದು ಮಾಡುತ್ತದೆ ಎನ್ನುವುದಕ್ಕೆ ಈ ಅವಾರ್ಡ್ ಗಳೇ ಸಾಕ್ಷಿ.. ಇನ್ನು ತಲಾ ಅಜಿತ್ ನಟನೆಯ ವಿಶ್ವಾಸಂ ಚಿತ್ರಕ್ಕೂ ನ್ಯಾಷನಲ್ ಅವಾರ್ಡ್ ಲಭಿಸಿದೆ, ಈ ಸಿನಿಮಾಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಡಿ.ಇಮ್ಮಾನ್ ಗೆ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಮುಡಿಗೇರಿದೆ..