ಲವ್ ಮಾಕ್ಟೇಲ್ ಕೃಷ್ಣ ಚಿತ್ರಕ್ಕೆ ದೀಪಕ್ ಗಂಗಾಧರ್ ಆಕ್ಷನ್ ಕಟ್

ಎಂ.ಡಿ. ಶ್ರೀಧರ್, ಕವಿರಾಜ್ ಮತ್ತಿತರ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ಬರಹಗಾರರಾಗಿ, ಚಿತ್ರಸಾಹಿತಿಯಾಗಿಯೂ ಗುರ್ತಿಸಿ ಕೊಂಡಿದ್ದಾರೆ.

ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಲವ್ ಮಾಕ್ಟೇಲ್ ಖ್ಯಾತಿಯ ಕ್ರಷ್ಣ ಈಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಯಜಮಾನ, ಅಮರ್, ಸೈರಾ ನರಸಿಂಹ ರೆಡ್ಡಿ, ಕಾಳಿದಾಸ ಕನ್ನಡ ಮೇಸ್ಟ್ರು, ನನ್ನ ಪ್ರಕಾರ ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಣೆ ಮಾಡಿದ ವಿತರಕ ದೀಪಕ್ ಗಂಗಾಧರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ದಲ್ಲೇ ಈ ಹೊಸ ಚಿತ್ರ ಸೆಟ್ಟೇರಲಿದೆ.

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದೀಪಕ್ ನಂತರದಲ್ಲಿ ತೂಗುದೀಪ ಪ್ರೊಡಕ್ಷನ್ ಬಳಗದ ಸದಸ್ಯನಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಂ.ಡಿ. ಶ್ರೀಧರ್, ಕವಿರಾಜ್ ಮತ್ತಿತರ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ಬರಹಗಾರರಾಗಿ, ಚಿತ್ರಸಾಹಿತಿಯಾಗಿಯೂ ಗುರ್ತಿಸಿ ಕೊಂಡಿದ್ದಾರೆ. ಜೊತೆಗೆ ನವೋದಯ ಡೇಸ್ ಎಂಬ ಚಲನಚಿತ್ರದಲ್ಲಿ ಸಹ ನಿರ್ಮಾಪಕನಾಗಿಯೂ ತೊಡಗಿಕೊಂಡಿದ್ದಾರೆ. ಈಗ
ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮದನ್ ಕುಮಾರ್ ಮತ್ತು ಲಕ್ಷ್ಮಿ ನಾರಾಯಣ ರಾಜು ಅರಸ್ ಈ ಚಿತ್ರ ವನ್ನು ನಿರ್ಮಾಣ ಮಾಡುತ್ತಿದ್ದಾರೆ.