ದರ್ಶನ್ ಕೈಗೆ ಮತ್ತೆ ಮಚ್ಚು ಕೊಡ್ತಾರೆ ಸ್ಟಾರ್ ಡೈರೆಕ್ಟರ್ ?

ಮತ್ತೆ ಲಾಂಗ್ ಹಿಡಿತಾರಾ ಸ್ಯಾಂಡಲ್​ವುಡ್​ ‘ದಾಸ’

‘ರಾಬರ್ಟ್​’ ಸಿನಿಮಾದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಅಭೂತಪೂರ್ವ ಜಯಗಳಿಸಿ ಮುನ್ನುಗ್ತಿದ್ದಾರೆ. ‘ರಾಬರ್ಟ್’ ಸಿನಿಮಾ ಆಯ್ತು. ಆದ್ರೂ ಕೂಡ ಡಿ ಬಾಸ್ ಮುಂದಿನ ಸಿನಿಮಾದ ಬಗ್ಗೆ ಒಂದು ಕ್ಲೂ ಕೂಡ ಕಾಣ ಸಿಗ್ತಿಲ್ಲ. ಅವರ ನೆಕ್ಸ್ಟ್​ ಪ್ರಾಜೆಕ್ಟ್ ಬಗ್ಗೆ ಬರೀ ಗಾಸಿಪ್ ಮಾತುಗಳೇ ಗಾಂಧಿ ನಗರದಲ್ಲಿ ಸದ್ದು ಮಾಡ್ತಿವೆ. ಇಷ್ಟು ದಿನ ದರ್ಶನ್ ‘ವೀರ ಮದಕರಿ ನಾಯಕ’ನಾಗ್ತಾರೆ.. ಇಲ್ಲ.. ಸದ್ಯಕ್ಕೆ ಮದಕರಿ ನಾಕನಿಗೆ ಬ್ರೇಕ್ ಮಿಲನ್ ಪ್ರಕಾಶ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಜೊತೆಗೆ ರಾಕ್​ಲೈನ್ ವೆಂಕಟೇಶ್​ ನಿರ್ಮಾಣದಲ್ಲಿ ‘ಗೋಲ್ಡ್ ರಿಂಗ್’ ತೊಡ್ತಾರೆ ಅನ್ನೋ ಸುದ್ದಿ ಸ್ಯಾಂಡಲ್​ವುಡ್ ಸರ್ಕಲ್​ನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಆ ಸ್ಟಾರ್ ನಿರ್ದೇಶಕನ ಜೊತೆ ದರ್ಶನ್ ಸಿನಿಮಾ, ಈ ನಿರ್ದೇಶಕರ ಜೊತೆ ದರ್ಶನ್​ರ ನೆಕ್ಸ್ಟ್​ ಸಿನಿಮಾ ಅನ್ನೋ ಸುದ್ದಿಯ ಸಾಗರ ಸದ್ಯದ ‘ಜಗ್ಗುದಾದ’ನ ಸಿನಿ ರೌಂಡ್ಸ್​ನಲ್ಲಿ. ಈಗ ‘ಯಜಮಾನ’ನ ನೆಕ್ಸ್ಟ್​ ಫಿಲ್ಮ್​ ಲಿಸ್ಟ್​ನಲ್ಲಿ ಸ್ಟಾರ್ ಡೈರೆಕ್ಟರ್ ಜೋಗಿ ಪ್ರೇಮ್ ಹೆಸರು ಕೂಡ ತಳುಕು ಹಾಕ್ತಿದೆ.

ಡಿ ಬಾಸ್​ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಜೋಗಿ ಪ್ರೇಮ್​

ಸ್ಯಾಂಡಲ್​ವುಡ್​ನ ಮೋಸ್ಟ್ ಬ್ಯುಜಿಯೆಷ್ಟ್ ಸ್ಟಾರ್ ಹೀರೋಗಳಲ್ಲಿ ಡಿ ಬಾಸ್ ಫಸ್ಟ್. ಒಂದು ವರ್ಷಕ್ಕೆ ಎರಡೆರಡು ಸಿನಿಮಾ ಬಂದ್ರೂ ಅವರ ನೆಕ್ಸ್ಟ್ ಸಾಲಿನಲ್ಲಿ ಕನಿಷ್ಟ ಅಂದ್ರೂ 4 ಸಿನಿಮಾಗಳು ಕ್ಯೂನಲ್ಲಿರುತ್ವೆ. ಜೊತೆ ಆ ಡೈರೆಕ್ಟರ್ ಈ ಡೈರೆಕ್ಟರ್ ಅಂತಾ ಸ್ಟಾರ್ ಡೈರೆಕ್ಟರ್ಸ್​ ಹೆರಸರುಗಳೂ ಗಾಸಿಪ್​ನಲ್ಲಿರುತ್ವೆ. ‘ರಾಬರ್ಟ್’ ಸಿನಿಮಾದ ನಂತ್ರ ದರ್ಶನ್​ರ ಮುಂದಿನ ಸಿನಿಮಾ ಯಾವುದಾಗುತ್ತೆ ಅನ್ನೋದು ಸದ್ಯ ಡಿ ಬಾಸ್ ಅಭಿಮಾನಿಗಳ ಬಿಲಿಯನ್ ಡಾಲರ್ ಪ್ರಶ್ನೆ. ದರ್ಶನ್ ಮುಂದಿನ ಸಿನಿಮಾ ಲಿಸ್ಟ್​ನಲ್ಲಿ ಈಗ ಜೋಗಿ ಪ್ರೇಮ್ ಹೆಸರೂ ಕೇಳಿ ಬರ್ತಿದೆ. ‘ಕರಿಯ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದಾಖಲೆ ಬರೆದಿದ್ದ ಈ ಜೋಡಿ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಅಂತಾ ಹೇಳಲಾಗ್ತಿದೆ.


2003ರಲ್ಲಿ ‘ಕರಿಯ’ ಸಿನಿಮಾದ ಮೂಲಕ ದರ್ಶನ್​ ಮತ್ತು ಜೋಗಿ ಪ್ರೇಮ್ ಚಂದನವನದಲ್ಲಿ ದಾಖಲೆ ಬರೆದಿದ್ರು. ಈ ಕಾಂಬಿನೇಷನ್ ಈಗ ಮತ್ತೆ ರಿಪೀಟ್ ಆಗ್ತಿದೆ ಅಂತಾ ಸುದ್ದಿ ಸದ್ದು ಮಾಡ್ತಿದೆ. ಜೋಗಿ ಪ್ರೇಮ್ ಸಿನಿಮಾಗಳಂದ್ರೆ ಅಲ್ಲಿ ಲವ್, ಸೆಂಟಿಮೆಂಟ್ ರೌಡಿಸಂ ಇರ್ಲೇ ಬೇಕು. ಅದ್ರಲ್ಲೂ ಡಿ ಬಾಸ್​ಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಾರೆ ಅಂದ್ರೆ ಮಚ್ಚು ಜಳಪಳಿಸೋದು 100 ಪರ್ಸೆಂಟ್. ಹೀಗಾಗಿ ಈ ಹಿಂದೆ ಲಾಂಗ್ ಹಿಡಿದು ಲವ್ವಲ್ಲಿ ಬಿದ್ದಿದ್ದ ‘ಕರಿಯ’ ಈಗ ಮತ್ತೆ ಕೈಗೆ ಮಚ್ಚು ಎತ್ಕೊಳ್ಳೋ ಟೈಮ್ ಹತ್ರಾ ಬರ್ತಿದೆ ಅಂತಾ ಮಾತನಾಡಿಕೊಳ್ತಿದ್ದಾರೆ ಡಿ ಬಾಸ್ ಫ್ಯಾನ್ಸ್. ‘ಚಕ್ರವರ್ತಿ’ ಸಿನಿಮಾದಲ್ಲಿ ದರ್ಶನ್ ಲಾಂಗ್ ಹಿಡಿದು ಸದ್ದು ಮಾಡಿದ್ರು. ಈಗ ಮತ್ತೆ ಡಿ ಬಾಸ್ ಕೈಗೆ ಜೋಗಿ ಪ್ರೇಮ್ ಮಚ್ಚು ಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಟ್ಟಾರೆಯಾಗಿ ದರ್ಶನ್​ರ ಮುಂದಿನ ಸಿನಿಮಾದ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಎಲ್ಲಿಲ್ಲದ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಯುಗಾದಿ ಹಬ್ಬಕ್ಕೆ ದರ್ಶನ್​ರ ಹೊಸ ಸಿನಿಮಾ ಲಾಂಚ್ ಆಗಲಿದೆ. ಅಧಿಕೃತವಾಗಿ ದರ್ಶನ್​ರ ಮುಂದಿನ ಸಿನಿಮಾ ಯಾವುದು ಮತ್ತು ಯಾರ ಜೊತೆ ಅನ್ನೋ ಎಲ್ಲಾ ಗಾಸಿಪ್​ಗಳಿಗೂ ಫುಲ್​ ಸ್ಟಾಪ್ ಬೀಳಲಿದೆ.