ದರ್ಶನ್ ಕೈಗೆ ಸೇರಿದ ‘ಗೋಲ್ಡ್ ರಿಂಗ್’

ಸದ್ಯಕ್ಕಿಲ್ಲ ವೀರ ಮದಕರಿ ನಾಯಕ..! ಗೋಲ್ಡ್ ರಿಂಗ್ ತೊಡಲಿರುವ ‘ಸರ್ದಾರ’
ಮತ್ತೊಂದು ಫ್ಯಾಮಿಲಿಎಂಟರ್ಟೈನ್ ಸಿನಿಮಾದಲ್ಲಿ ದರ್ಶನ್

ಈ ಜನರೇಷನ್ ಹೀರೋಗಳಲ್ಲೊ ಹಿಸ್ಟಾರಿಕಲ್ ಮತ್ತು ಐತಿ ಹಾಸಿಕ ಸಿನಿಮಾಗಳಿಗೆ ಎದೆ ಕೊಟ್ಟು ನಿಲ್ಲೋ ಸೂಪರ್ ಸ್ಟಾರ್ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗಾಗಲೇ ಸಂಗೋಳ್ಳಿ ರಾಯಣ್ಣನಂತಹ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಇತಿಹಾಸ ಗೀಚಿರೋ ಡಿ ಬಾಸ್ ವೀರ ಮದಕರಿ‌ ಅವತಾರದಲ್ಲಿ ಕಾಣಿಸಿಕೊಳ್ತಿರೋದು ಗೊತ್ತೇ ಇದೆ. ಈ ಸಿನಿಮಾ ಲಾಂಚ್ ಆಗಿ, ಮುಹೂರ್ತ ಮುಗ್ಸಿ, ಶೂಟಿಂಗ್ ಕೂಡ ಶುರುವಾಗಿತ್ತು. ಆದ್ರೆ ಕೊರೊನಾ ಬಂದ್ ಎಲ್ಲವನ್ನೂ ಸ್ಟಾಪ್ ಮಾಡಿದೆ. ಸದ್ಯಕ್ಕೆ ವೀರ ಮದಕರಿ ಸಿನಿಮಾ ಬರಲ್ಲ ಅಂತಿವೆ ಸ್ಯಾಂಡಲ್ವುಡ್ ಮೂಲಗಳು. ಆದ್ರೆ ಅದೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಮತ್ತೊಂದು ಸಿನಿಮಾಗೆ ದರ್ಶನ್ ಸಹಿ ಹಾಕಿದ್ದು, ಮದಕರಿ ಸಿನಿಮಾಗೂ ಮುಂಚೆ ಈ ಸಿನಿಮಾ ಬರಲಿದೆ.

ಹೌದು, ಕೊರೊನಾ ಕಾರಣ ಸದ್ಯಕ್ಕೆ ವೀರ ಮದಕರಿ ಸಿನಿಮಾದ ಕೆಲಸಗಳನ್ನ ನಿಲ್ಲಿಸಲಾಗಿದೆ. ಆದ್ರೆ ಅದೇ ನಿರ್ಮಾಪಕನಜೊತೆ ಡಿ ಬಾಸ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಅದಕ್ಕೆ ಈಗಾಗಲೇ ಟೈಟಲ್ ಕೂಡ ಫಿಕ್ಸ್ ಆಗಿದ್ದು, ‘ಗೋಲ್ಡ್ ರಿಂಗ್’ ಅಂತಾ ಶಿರ್ಷಿಕೆ ಇಡಲಾಗಿದೆ. ಈ ಬಗ್ಗೆ ಸ್ವತಃ ರಾಕ್ ಲೈನ್ ವೆಂಕಟೇಶ್ ಅವರ ಮಗ ಮಾಹಿತಿ ನೀಡಿದ್ದು, ಈಗಾಗಲೆ ಸ್ಕ್ರಿಪ್ಟ್ ಎಲ್ಲಾ ರೆಡಿಯಾಗಿದ್ದು, ನಿರ್ದೇಶಕ ಯಾರು ಅನ್ನೋದನ್ನ ಕೆಲ ದಿನಿಗಳಲ್ಲೇ ಬಹಿರಂಗ ಮಾಡ್ತೀವಿ ಅಂತಾ ಹೇಳಿದ್ದಾರೆ. ಸದ್ಯ ದರ್ಶನ್ ರ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಮಾರ್ಚ್ 11ರಿಂದ ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಇನ್ನುಳಿದಂತೆ ಮಿಲನ ನಾಗರಾಜ್, ಸಂದೇಶ್ ನಾಗರಾಜ್, ಶೈಲಜಾನಾಗ್, ತೆಲುಗು ನಿರ್ಮಾಪಕರೊಬ್ಬರ ಜೊತೆ ಸೇರಿದಂತೆ ಹಲವು ನಿರ್ಮಾಪಕರ ಸಿನಿಮಾಗಳು ದರ್ಶನ್ ಕೈಯಲ್ಲಿವೆ.