ದಸರಾ ಹಬ್ಬಕ್ಕೆ ‘ದಮಯಂತಿ’ ಮರು ಬಿಡುಗಡೆ.

ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕೊರೋನ ಹಾವಳಿಯಿಂದ ಕೆಲವು ತಿಂಗಳ ಕಾಲ ಚಿತ್ರಮಂದಿರಗಳ ಬಾಗಿಲು ಮುಚ್ಚಿತ್ತು. ಈಗ ಸರ್ಕಾರ ಕೆಲವು ನಿಯಮಗಳನ್ನು ಪಾಲಿಸಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದೆ.

ಈಗ ನಾಡಹಬ್ಬ ದಸರಾ ಸಮಯವಾಗಿರುವುದರಿಂದ ಅಭಿಮಾನಿಗಳು ದಮಯಂತಿ ಚಿತ್ರವನ್ನು ಮರು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ. ಅವರ ಒತ್ತಾಯದ ಮೇರೆಗೆ ಅಕ್ಟೋಬರ್ 23ರಂದು ದಮಯಂತಿ ಚಿತ್ರ ಮರು ಬಿಡುಗಡೆ ಮಾಡಲು ನಿಶ್ಚಿಸಿರುವುದಾಗಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ನವರಸನ್ ತಿಳಿಸಿದ್ದಾರೆ.
ಶ್ರೀ ಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರಮಾಣವಾಗಿರುವ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ, ಸಾಧುಕೋಕಿಲ, ಭಜರಂಗಿ ಲೋಕಿ, ತಬಲ ನಾಣಿ, ಮಜಾಟಾಕೀಸ್ ಪವನ್ ಮುಂತಾದವರು ನಟಿಸಿದ್ದಾರೆ.
ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಗಣೇಶ್ ನಾರಾಯಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಹೇಶ್ ಅವರ ಸಂಕಲನವಿದೆ.