ಈ ಹಿಂದೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಕುಮಾರ್ ಎಲ್ ಈ ಬಾರಿ “ಕ್ರಿಟಿಕಲ್ ಕೀರ್ತನೆಗಳು” ಎನ್ನುವ ಮತ್ತೂಂದು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿ ಪ್ರೇಕ್ಷಕರ ಮುಂದೆ ತರುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಫಸ್ಟ್ಕಾಪಿಯೊಂದಿಗೆ ಹೊರಬಂದಿರುವ “ಕ್ರಿಟಿಕಲ್ ಕೀರ್ತನೆಗಳು” ಸದ್ಯ ಸೆನ್ಸಾರ್ ಮುಂದಿದೆ.
ಕೇಸರಿ ಫಲಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ “ಕ್ರಿಟಿಕಲ್ ಕೀರ್ತನೆಗಳು” ಚಿತ್ರಕ್ಕೆ ಕುಮಾರ್ ಎಲ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣವಿದೆ. ಚಿತ್ರದ ಮೂರು ಹಾಡುಗಳಿಗೆ ವೀರ್ ಸರ್ಥ್ ಸಂಗೀತ ಸಂಯೋಜಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ನ ವಿಷಯಕ್ಕೆ ಸಂಬಂಧಿಸಿದ ನೈಜ ಘಟನೆ ಆಧಾರಿಸಿದ ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿ ಮೂಡಿಬಂದಿದೆ.
ತಬಲ ನಾಣಿ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪಾ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಮೊದಲಾದವರು “ಕ್ರಿಟಿಕಲ್ ಕೀರ್ತನೆಗಳು” ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು , ಕುಂದಾಪುರ, ಮಂಡ್ಯ, ಬೆಳಗಾವಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಇದೇ ಅಕ್ಟೋಬರ್ಕೊನೆಗೆ “ಕ್ರಿಟಿಕಲ್ಕರ್ತನೆಗಳು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಈ ಚಿತ್ರದಲ್ಲಿ ವೀರ್ ಸಮರ್ಥ್ ಸಂಗೀತ ಸಂಯೋಜನೆಯ ಐಪಿಎಲ್ ಬೆಟ್ಟಿಂಗ್ ಸಾಂಗ್ ಒಂದು ಸದ್ಯದಲ್ಲೇ ರಿಲೀಸ್ ಆಗಲಿದ್ದು ಇದು ಟ್ರೆಂಡಿಂಗ್ ಸೃಷ್ಟಿಸಲಿದೆ ಎಂಬುದು ನಿರ್ದೇಶಕ ಕುಮಾರ್ ಅವರ ಅಭಿಪ್ರಾಯ.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.