ಸಿನಿರಸಿಕರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ !

ಥಿಯೇಟರ್ ನಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದವರಿಗೆ‌ ಇಲ್ಲಿದೆ ನೋಡಿ ಸಿಹಿ ಸುದ್ದಿ.

ಲಾಕ್ ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳಿಗೂ ಬಿದ್ದ ಹೊಡೆತ ಅಂತಿತದ್ದಲ್ಲ. ಆದರೆ ಲಾಕ್ ಡೌನ್ ಕೊಂಚ ಕೊಂಚವೇ ಸಡಿಲಿಕೆಯಾಗಿ‌ ಇಂದು ಕೆಲವು ಕ್ಷೇತ್ರಗಳು ಸ್ವಲ್ಪ‌ ಸುಧಾರಿಸಿಕೊಂಡಿವೆ ಆದರೆ ಸಿನಿಮಾ ಮಂದಿಗೆ ಮಾತ್ರ ಈ ಅವಕಾಶ ದೊರೆತಿಲ್ಲ. ನಿಲ್ಲಿಸಿದ್ದ ಚಿತ್ರಗಳ‌ ಚಿತ್ರೀಕರಣಗಳನ್ನು ಮುಂದುವರೆಸಲು ಅವಕಾಶ ನೀಡಿದ್ದರೂ ಸಹ ಸಿನಿಮಾ ನಂಬಿಕೊಂಡು ಬದುಕುತ್ತಿದ್ದ ಅದೆಷ್ಟೋ‌ ಮಂದಿಯ ಜೀವನ ಕಷ್ಟದಲ್ಲಿದೆ. ಇಷ್ಟೇ ಅಲ್ಲದೆ ಚಿತ್ರಮಂದಿರಗಳ‌ ಮಾಲೀಕರ ಪಾಡಂತೂ ಹೇಳತೀರದು. ಚಿತ್ರ ರಿಲೀಸ್ ಆದ ದಿನ ಸಂಭ್ರಮ ಮನೆಮಾಡುತ್ತಿದ್ದ ಚಿತ್ರಮಂದಿರಗಳಲ್ಲಿ ಆ ಸಂಭ್ರಮ‌ ಮಾರ್ಚ್ ನಿಂದಲೇ ಮರೆಯಾಗಿದೆ. ಹೌದು ಕೊರೋನಾ ತಡೆಯುವ ಉದ್ದೇಶದಿಂದ ಲಾಕ್ ಡೌನ್ ಜಾರಿ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಅನ್ ಲಾಕ್ 4.0 ನಲ್ಲಿ ಚಿತ್ರಮಂದಿರಗಳ ಪುನರಾರಂಭ ಮಾಡುವ ಸಾಧ್ಯತೆಗಳಿದೆ. ಹಲವು ಷರತ್ತುಗಳೊಂದಿಗೆಚಿತ್ರಮಂದಿರಗಳ ಪುನರಾರಂಭಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಿ ಇದೇ ಸೆಪ್ಟೆಂಬರ್ ನಿಂದ ಚಿತ್ರಮಂದಿರಗಳ ಪುನರಾರಂಭಕ್ಕೆ ಅನುಮತಿ‌ ನೀಡಬಹುದು ಎಂದು ಹೇಳಲಾಗಿದೆ.ಇದರಿಂದ ಇಷ್ಟು ದಿನ ಚಿತ್ರಮಂದಿರಗಳು‌ ಮುಚ್ಚಿದ್ದ ಕಾರಣ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳಿಗೆ‌ ಮರು‌ಜೀವ ಬರುತ್ತದೆ.