ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಚಿಣ್ಣರ ಕಲರವ 13ನೇ ಸಂಚಿಕೆ ಜನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಶೈಲೂ ಶಂ ಸಂಸ್ಥೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಚಿಣ್ಣರ ಕಲರವ 13ನೇ ಸಂಚಿಕೆ ಜನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಪುಟ್ಟ ಬಾಲಕಿ ಮಹತಿ ಅನಂತ್ ನರಸಿಂಹ ಸ್ತುತಿ ಗೆ ಹಾಕಿದ ಹೆಜ್ಜೆ ಪ್ರೇಕ್ಷಕರ ಹೃದಯದಲ್ಲಿ ಸ್ಥಿರವಾಗಿ ನಿಂತಿತು. ಸಮಾರಂಭ ಹೇಗೆ ನಡೆಸಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತ ಈ ವೈಭವ ಅನಂತ ವಿಕ್ರಂ ಮತ್ತು ಚೈತ್ರ ಅನಂತ್ ಅವರ ಕಲ್ಪನೆಗೆ ಸಾಕಾರಮೂರ್ತಿ ಆಯಿತು. ಖ್ಯಾತ ಕಲಾವಿದೆ ಸುಧಾರಾಣಿ ಹಾಗೂ ಚಲನಚಿತ್ರ ಪ್ರಚಾರ ಕರ್ತ ಡಿಜೆ ವೆಂಕಟೇಶ್ ನೃತ್ಯ-ಸಂಗೀತ ಗಳಲ್ಲಿ ಮೇರು ಪ್ರತಿಭೆ ಡಾ. ವೀಣಾ ಮುಂತಾದ ಗಣ್ಯರು ಸನ್ಮಾನಿತರಾದ ರು. ಗೋಪಾಲಕೃಷ್ಣ ಗುರೂಜಿ ಅವರು ಸಂಸ್ಥೆಯ ಚಟುವಟಿಕೆಗೆ ಹರಸಿದರು. ರಾಮಚಂದ್ರ ಉಪಾಧ್ಯಾಯ ಹಾಗೂ ನರಸಿಂಹಚಾರ್ಯ ಅವರುಗಳು ಪಾಲ್ಗೊಂಡರು.