ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಮಾದಪ್ಪನ ಭಕ್ತರು.

ಚಂದನ್​ ಶೆಟ್ಟಿಗೆ ಧಿಕ್ಕಾರ…

ರ‍್ಯಾಪರ್​ ಚಂದನ್​ ಶೆಟ್ಟಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದೇ ತಿಂಗಳ 22 ರಂದ ಯೂಟ್ಯೂಬ್‌ನಲ್ಲಿ “ಕೋಲು ಮಂಡೆ ಜಂಗಮ ದೇವರು” ಎಂಬ ಹೊಸ ರ‍್ಯಾಪ್​ ಸಾಂಗ್​ ಬಿಡುಗಡೆಯಾಗಿದೆ. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಾದಪ್ಪನ ಬಗ್ಗೆ ಅದರಲ್ಲೂ ಶ್ರೀ ಕ್ಷೇತ್ರದ ಪರಂಪರೆಯ ಹಾಡು “ಕೋಲು ಮಂಡೆ ಜಂಗಮ ದೇವ “ ಜಾನಪದ ಶೈಲಿಯ ಹಾಡನ್ನು ಮತ್ತು ಮಾದಪ್ಪನ ಇತಿಹಾಸವನ್ನು ಕೇವಲವಾಗಿ ಹಾಗೂ ಅಶ್ಲೀಲವಾಗಿ ಜನರಿಗೆ ತೋರಿಸುವ ಮೂಲಕ ಹಿಂದೂ ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಮಾಡಿ, ಮಲೈ ಮಹದೇಶ್ವರ ರವರ ಇತಿಹಾಸವನ್ನು ತಿರುಚಿರುವುದು ಸರಿಯಲ್ಲ. ಇಂತಹ ವಿಕೃತಿ ಮನಸ್ಸಿನ ವ್ಯಕ್ತಿ ಆಟಗಳಿಗೆ ಆನಂದ್ ಆಡಿಯೋ ಕಂಪನಿಯು ಉತ್ತೇಜನ ಕೊಟ್ಟಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಸೇರಿದಂತೆ ಮಂಡ್ಯ, ಮದ್ದೂರು ಮತ್ತು ಮೈಸೂರು ಭಾಗಗಳಲ್ಲಿ ತುಂಬಾ ಪ್ರಖ್ಯಾತಿ ಪಡೆದಿದೆ.ಹಾಗಾಗಿ, ಚಂದನ್ ಶೆಟ್ಟಿ ಹಾಗೂ ಅವರ ತಂಡ ಹಾಡಿನ ಬಗ್ಗೆ ಕ್ಷಮೆ ಕೇಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.