ಚಾಣಕ್ಯ ನೀತಿ ಸೂತ್ರಗಳು 6.ನಮ್ಮ ಸಮಸ್ಯೆಗಳನ್ನು, ನೋವುಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು.

ನಮ್ಮ ಸಮಸ್ಯೆಗಳನ್ನು, ನೋವುಗಳನ್ನು ಮತ್ತೊಬ್ಬರ
ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಜನ ನಮ್ಮನ್ನು
ನೋಡಿ ಗೇಲಿ ಮಾಡಿಕೊಂಡು ನಗುವುದರ ಜೊತೆಗೆ
ನಮ್ಮ ದುರ್ಬಲತೆಗಳ ಲಾಭ ಪಡೆಯುತ್ತಾರೆ…

ಜೀವನದಲ್ಲಿ ಏನಾದರೂ ಒಂದನ್ನು ಕಲಿಯುವಾಗ,
ಬ್ಯುಸಿನೆಸ್ ಮಾಡುವಾಗ ಮತ್ತು ಊಟ ಮಾಡುವಾಗ
ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು…

ಕಾನೂನನ್ನು ಪಾಲಿಸದ, ಮಾನ ಮರ್ಯಾದೆಗೆ
ಹೆದರದ, ತಿಳುವಳಿಕೆ ಇಲ್ಲದ, ದಾನ ಮಾಡದ,
ಕಲೆಯನ್ನು ಗೌರವಿಸಿದ ಜನರಿರುವ ರಾಜ್ಯದಲ್ಲಿ
ಬುದ್ದಿವಂತರು ಯಾವುದೇ ಕಾರಣಕ್ಕೂ ಇರಬಾರದು.

ಏನಾದರೂ ಒಂದು ಹೊಸ ಕೆಲಸವನ್ನು
ಪ್ರಾರಂಭಿಸಿದರೆ ಯಾವುದೇ ಕಾರಣಕ್ಕೂ ಹೆದರಬೇಡಿ.
ಹೆದರಿ ಹಿಂದೆ ಸರಿದು, ಹಿಡಿದ ಕೆಲಸವನ್ನು ಅರ್ಧಕ್ಕೆ
ಬಿಡಬೇಡಿ, ಹಿಡಿದ ಕೆಲಸವನ್ನು ಧೈರ್ಯದಿಂದ
ಪ್ರಾಮಾಣಿಕವಾಗಿ ಮಾಡಿ ಮುಗಿಸಿದವರು
ಮಾತ್ರ ಸಂತೋಷವಾಗಿರುತ್ತಾರೆ…

ಬಡತನವನ್ನು ಭಾಗ್ಯದಿಂದ ಬೆಳಗಬಹುದು.
ಶುಚಿಯಾಗಿದ್ದರೆ ಸಾದಾ ಬಟ್ಟೆಗಳು ಸಹ
ಸುಂದರವಾಗಿ ಕಾಣುತ್ತದೆ. ಬಿಸಿಯಾಗಿದ್ದರೆ
ರುಚಿಯಿಲ್ಲದ ಆಹಾರವು ಇಷ್ಟವಾಗುತ್ತದೆ. ಅದೇ
ರೀತಿ ಸಿರಿತನ, ಸೌಂದರ್ಯ ಸಂಪತ್ತು ಇಲ್ಲದಿದ್ದರೂ
ಸದ್ಗುಣಗಳಿರುವ ವ್ಯಕ್ತಿ ಎಲ್ಲರಿಗೂ ಇಷ್ಟವಾಗುತ್ತಾನೆ.

»»»»»» ಮುಂದುವರೆಯುವುದು