ಚಾಣಕ್ಯ ನೀತಿ ಸೂತ್ರಗಳು 5.ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು.

ಒಂದು ಹೂವಿನ ಸುವಾಸನೆ ಗಾಳಿ
ಬೀಸುವ ದಿಕ್ಕಲ್ಲಿ ಮಾತ್ರ ಪಸರಿಸುತ್ತದೆ.
ಆದ್ರೆ ಒಬ್ಬ ಒಳ್ಳೇ ವ್ಯಕ್ತಿಯ ಗುಣಗಾನ
ಎಲ್ಲ ದಿಕ್ಕುಗಳಲ್ಲಿ ಪಸರಿಸುತ್ತದೆ.

ಒಬ್ಬ ಆಸೆಬುರುಕನನ್ನು ಹಣಕೊಟ್ಟು
ಕೈವಶಮಾಡಿಕೊಳ್ಳಬಹುದು. ಆದ್ರೆ ಒಬ್ಬ
ಸಜ್ಜನನನ್ನು ಕೈವಶ ಮಾಡಿಕೊಳ್ಳಬೇಕಾದರೆ
ಬರೀ ಸತ್ಯವನ್ನೇ ನುಡಿಯಬೇಕಾಗುತ್ತದೆ…

ಹೇಗೆ ಒಬ್ಬ ಕುಡುಕನಿಗೆ ಸರಿ ಕೆಟ್ಟದ್ದು
ಗೊತ್ತಾಗುವುದಿಲ್ಲವೋ ಅದೇ ರೀತಿ ಒಬ್ಬ
ಸ್ವಾರ್ಥ ಆಸೆಗಳ ಸಾಧಕನಿಗೆ ಸರಿ ಕೆಟ್ಟದ್ದು
ಸ್ವಲ್ಪವೂ ಗೊತ್ತಾಗುವುದಿಲ್ಲ.

ಚಿನ್ನದ ಅಸಲಿಯತನ್ನು ಪರೀಕ್ಷಿಸಲು ಅದನ್ನು
ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ
ರೀತಿ ವ್ಯಕ್ತಿಗಳ ಮೇಲೆ ಬರುವ ಆಪಾದನೆಗಳು
ಅವರ ಅಸಲಿಯತ್ತನ್ನು ಪರೀಕ್ಷಿಸುತ್ತವೆ.

ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ
ಇರುವುದಕ್ಕಿಂತ ಒಂಟಿಯಾಗಿ ಇರುವುದೇ
ಒಳ್ಳೆಯದು. ಯಾಕೆಂದರೆ ಅವರು ನಮ್ಮ ಬಾಳನ್ನು
ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ.

»»»»»» ಮುಂದುವರೆಯುವುದು