ಡಿ.ಎಸ್ ಮ್ಯಾಕ್ಸ್ ನಿಂದ ಕೊರೋನ ಕುರಿತಾದ ಹಾಡು ಬಿಡುಗಡೆ.

ಕೊರೋನ ಹಾವಳಿಯಿಂದ ಈ ವರ್ಷ ಸಂಕಷ್ಟ ಒಳಗಾಗಿರುವ ಸಂಖ್ಯೆ ಬಹಳ. ಇತ್ತೀಚೆಗಂತೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆ ಅದೇ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ನಾವು ಜಾಗರೂಕತೆಯಿಂದ ಇರಬೇಕು. ಆಗ ಯಾವುದನ್ನು ಧೈರ್ಯವಾಗಿ ಎದುರಿಸಬಹುದು. ಈ ನಿಟ್ಟಿನಲ್ಲಿ ಡಿ.ಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ॥ ಎಸ್.ಪಿ ದಯಾನಂದ್ ರವರು ಸಹ “ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ” ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಉತ್ಸಾಹಿ ಕಲಾವಿದರಿಗೆ ಪ್ರತಿಭಾವಂತರಿಗೆ ಅವಕಾಶ ನೀಡಿ ಸಾರ್ವಜನಿಕರಿಗೆ ಡಿ.ಎಸ್ ಮ್ಯಾಕ್ಸ್ ಎಸ್. ಪಿ. ದಯಾನಂದ್ ರವರು ಭೂಮಿ ಬದಲಾಗಿಲ್ಲ ದೈವ ಕೈಬಿಟ್ಟಿಲ್ಲ ಎಂಬ ಹಾಡನ್ನು ನಿರ್ಮಿಸಿ ಧೈರ್ಯ ಮತ್ತು ಉತ್ಸಾಹವನ್ನು ತುಂಬಿದ್ದಾರೆ. 

ಈ ಹಾಡನ್ನು ಅಭಿಲಾಷ್ ಜಿ.ವಿ ಬರೆದು, ಹಾಡಿದ್ದಾರೆ. ನಿರ್ದೇಶನ ಕೂಡ ಅಭಿಲಾಷ್ ಅವರದೆ. ಈ ಹಾಡಿನಲ್ಲಿ ವರನಟ ಡಾ. ರಾಜ್ಕುಮಾರ್, ಡಾ||ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್ ಅವರ ಧ್ವನಿ ಅನುಕರಣೆ ಮಾಡುವ ಮೂಲಕ ಕೋರೋನಾ ಬಗ್ಗೆ ಅಭಿಲಾಷ್ ಎಚ್ಚರಿಸಿದ್ದಾರೆ.

ಈ ಹಾಡಿಗೆ ಅನಂತ್ ಆರ್ಯನ್ ಅವರು ಎಲ್ಲ ವರ್ಗದ ಜನರಿಗೂ ಇಷ್ಟವಾಗುವಂತೆ ಸಂಗೀತ ಸಂಯೋಜಿಸಿದ್ದಾರೆ.
ಧ್ವನಿ ಗ್ರಹಣದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಪಳನಿ ಡಿ ಸೇನಾಪತಿ ರವರು ಮಾಸ್ಟರಿಂಗ್ ಮಿಕ್ಸಿಂಗ್ ಮಾಡಿದ್ದಾರೆ
ಛಾಯಾಗ್ರಹಣ ಪ್ರಶಾಂತ್ ಎಮ್ ಯಾದವ್, ಸಂಕಲನ ರಾಘವೇಂದ್ರ ಕೆ.ಆರ್, ವಿ ಎಫ್ಎಕ್ಸ್ ಮತ್ತು ಕಲರಿಂಗ್ ಕೀ ಲೈಟ್ಸ್ ಸಂಸ್ಥೆಯ ಮಂಜು ಕೆಬಿ, ಅನಿಲ್ ಸಾಗರ್, ಸಂಗಮೇಶ್ ವಾಲೆ ಮಾಡಿದ್ದಾರೆ. 

ಬೆಂಗಳೂರು ನಿರ್ಗಮಿತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ಕೆ. ರಾಮಚಂದ್ರ ಹಾಗೂ ಡಿ ಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ॥ ಎಸ್ ಪಿ ದಯಾನಂದ್ ರವರು ಅಭಿಲಾಶ್ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭೂಮಿ ಬದಲಾಗಿಲ್ಲ ದೈವ ಕೈ ಬಿಟ್ಟಿಲ್ಲ ಹಾಡಿನ ಪೋಸ್ಟರನ್ನು ಬೆಂಗಳೂರು ನಗರ ಪೊಲೀಸ್‌ ಕೇಂದ್ರ ಕಛೇರಿಯಲ್ಲಿ ಉಪ ಕಮಿಷನರ್ ಕೆ .ರಾಮಚಂದ್ರ ಮತ್ತು ಅಸಿಸ್ಟೆಂಟ್ ಕಮೀಷನರ್ ಆದ ಅಜಯ್ ಕುಮಾರ್ ರವರ ನೇತೃತ್ವದಲ್ಲಿ ಹಾಡಿನ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಹಾಡಿನ ಬಿಡುಗಡೆಗೂ ಮುನ್ನ ಮಾತನಾಡಿದ ಡಾಕ್ಟರ್ ಎಸ್ಪಿ ದಯಾನಂದ್ ರವರು ನಮ್ಮ ಹಾಡಿನ ಶೀರ್ಷಿಕೆ ಹೇಳುವ ರೀತಿ ಕೊರೊನಾದಿಂದ “ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ “
ಎಲ್ಲರೂ ಧೈರ್ಯ ,ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ನಡೆದು ಕೊರೊನಾಗೆ ಎಚ್ಚರ ವಹಿಸಿ ಕೊರೊನಾದಿಂದ ಭಯಮುಕ್ತರಾಗಿ ಎಂದು ಹೇಳುದ್ದಾರೆ. A2 Music ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.