ಬನಶಂಕರಿಯಲ್ಲಿ “ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ” ಹತ್ತನೇ ಶಾಖೆ ಆರಂಭ.

ಸಿಹಿತಿಂಡಿಗಳಲ್ಲಿ ಹೋಳಿಗೆಗೆ ವಿಶೇಷ ಸ್ಥಾನ ಉಂಟು. ಹೋಳಿಗೆ ರುಚಿ ಸವಿಯದ ನಾಲಿಗೆ ವಿರಳ. ಇಂತಹ ಹೋಳಿಗೆ ಪ್ರಿಯರಿಗೆ ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ ಎಂಬ ವಿನೂತನ ಮಳಿಗೆಯ ಹತ್ತನೇ ಶಾಖೆ ಬನಶಂಕರಿಯಲ್ಲಿ ಭಾನುವಾರ ಆರಂಭವಾಯಿತು.

ಬಿಗ್ ಬಾಸ್ ನ ಶೈನ್ ಶೆಟ್ಟಿ, ಒಗ್ಗರಣೆ ಡಬ್ಬಿ ಖ್ಯಾತಿ ಮುರಳಿ, ಬಿಜೆಪಿ ಯುವ ಮುಖಂಡ ಉಮೇಶ್(ಕಟ್ಟಾಳ್), ಬಿಬಿಎಂಪಿ ವಿರೋಧಪಕ್ಷದ ನಾಯಕರಾದ ಬಸವರಾಜ್, ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನ ಸ್ಥಾಪಕ ವೆಂಕಟೇಶ್ ಅವರು ಉದ್ಘಾಟನಾ ಸಮಾರಂಭಕ್ಕೆ ಮುಂತಾದ ಗಣ್ಯರ ಸಮ್ಮುಖದಲ್ಲಿ ಹತ್ತನೇ ಶಾಖೆ ಆರಂಭವಾಯಿತು. ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಈ ಮಳಿಗೆ ಗ್ರಾಹಕರ ಮನ ಗೆದ್ದಿದೆ.  ನೂತನ ಶಾಖೆಯ ಆರಂಭದ ನೆನಪಿಗಾಗಿ ಒಂದು ರೂಪಾಯಿಗೆ ಒಂದು ಹೋಳಿಗೆ ಮಾರಾಟ ‌ಮಾಡಿದ್ದು ವಿಶೇಷ. ಹೋಳಿಗೆ, ಕುರುಕ್ ತಿಂಡಿ ಹಾಗೂ ಚಟ್ನಿ ಪುಡಿ, ಬಿಸಿಬೇಳೆ ಬಾತ್ ಪುಡಿ ಸೇರಿದಂತೆ ಎಲ್ಲಾ ರೀತಿಯ ಪುಡಿಗಳು ಈ ಮಳಿಗೆಯಲ್ಲಿ ಲಬ್ಯವಿದೆ.