ನೂತನ ತಂತ್ರಜ್ಞಾನದೊಂದಿಗೆ ‘ಭಾಗ್ಯವಂತರು’ ಬರುತ್ತಿದ್ದಾರೆ.

1976ರಲ್ಲಿ ದ್ವಾರಕೀಶ್ ಅವರು‌ ನಿರ್ಮಿಸಿ, ಭಾರ್ಗವ ಅವರು ನಿರ್ದೇಶಿಸಿದ್ದ ಈ ಚಿತ್ರ ಮರು ಬಿಡುಗಡೆಯಾಗಿ ಅಪಾರ ಯಶಸ್ಸು ಕಾಣಲಿದೆ ಎಂಬ ಅನಿಸಿಕೆ ಮುನಿರಾಜು ಅವರದು.

ನಟಸಾರ್ವಭೌಮ ಡಾ||ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ಅಭಿನಯಿಸಿದ್ದ ‘ಭಾಗ್ಯವಂತರು’ ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಫೆಬ್ರವರಿ ಮೊದಲವಾರದಲ್ಲಿ ಮರು ಬಿಡುಗಡೆಯಾಗಲಿದೆ. ಸಿನಿಮಾ ಸ್ಕೋಪ್ 7.1 ಡಿ ಐ ತಂತ್ರಜ್ಞಾನ‌ ಬಳಸಿಕೊಳ್ಳಲಾಗಿದೆ. ನರ್ತಕಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತ ‌100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಚಿತ್ರ ಬಿಡುಗಡೆಯಾಗಲಿದೆ.

ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ‌ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು ಅವರು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಪ್ರಸ್ತುತ ಕೃಷ್ಣಾಚಾರಿ ಚಿತ್ರದ ನಿರ್ಮಾಪಕರು ಆಗಿರುವ ಮುನಿರಾಜು ಅವರು ‘ನನಗೆ ಡಾ||ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಬಗ್ಗೆ ವಿಶೇಷ ಗೌರವ. ಅವರೆ ನನಗೆ ಭಾಗ್ಯವಂತರು’ ಎಂದು ಹೇಳುತ್ತಾರೆ.
1976ರಲ್ಲಿ ದ್ವಾರಕೀಶ್ ಅವರು‌ ನಿರ್ಮಿಸಿ, ಭಾರ್ಗವ ಅವರು ನಿರ್ದೇಶಿಸಿದ್ದ ಈ ಚಿತ್ರ ಮರು ಬಿಡುಗಡೆಯಾಗಿ ಅಪಾರ ಯಶಸ್ಸು ಕಾಣಲಿದೆ ಎಂಬ ಅನಿಸಿಕೆ ಮುನಿರಾಜು ಅವರದು.