ಜನವರಿಯಲ್ಲಿ ‘ಬೆಲ್ ಬಟನ್’

ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿ ಅನುಭವವಿರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದ ಚಟುವಟಿಕೆಗಳು ಮಾಮೂಲಿನಂತೆ ಆಗುತ್ತಿದೆ. ನೂತನ ಚಿತ್ರಗಳು ಆರಂಭವಾಗುತ್ತಿದೆ.‌ ಈ ಪೈಕಿ ‘ಬೆಲ್ ಬಟನ್’ ನೂತನ ಚಿತ್ರ ಸಹ ಜನವರಿಯಲ್ಲಿ ಸೆಟೇರಲಿದೆ. ಫ್ರೆಶ್ ಫಿಲಂಸ್ ಲಾಂಛನದಲ್ಲಿ ಹೇಮಂತ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ‌ನಲವತ್ತು ದಿನಗಳ ಕಾಲ ನಡೆಯಲಿದೆ.

ರಂಗಭೂಮಿ ಹಿನ್ನೆಲೆಯಿರುವ ಲಕ್ಷ್ಮೀನರಸಿಂಹ ಈ ಚಿತ್ರದ ನಿರ್ದೇಶಕರು. ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿ ಅನುಭವವಿರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಲವ್ ಹಾಗೂ ಫ್ಯಾಮಿಲಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌. ಮೂರು ಹಾಡುಗಳಿದ್ದು, ಪ್ರಶಾಂತ್ ಸಂಗೀತ ನೀಡುತ್ತಿದ್ದಾರೆ. ಎಂ ಜೈ ಛಾಯಾಗ್ರಹಣ ಹಾಗೂ ಹರೀಶ್ ಸಂಕಲನ ಈ ಚಿತ್ರಕ್ಕಿದೆ. ಶಿವ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರಾಧಿಕಾ ರಾವ್, ಅಚ್ಯುತ ಕುಮಾರ್, ವೇಣುಗೋಪಾಲ್, ಗಂಗರಾಜ್, ಮುತ್ತು, ನಾರಾಯಣ ಗೌಡ, ಯಾದವ್ ಮುಂತಾದವರಿದ್ದಾರೆ.