ಸಾಯಿಕುಮಾರ್ ಗೆ “ಬಂಪರ್” ಚಾನ್ಸ್

“ಬಂಪರ್” ನಲ್ಲಿ ಹಿರಿಯ ನಟ ಸಾಯಿ ಕುಮಾರ್ ಅಭಿನಯಿಸಲಿದ್ದಾರೆ. ಸಾಯಿ ಕುಮಾರ್ ನಾಯಕ ನಟ ಧನ್ವೀರ್ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿರುವ ಡಬ್ಬಿಂಗ್ ಆರ್ಟಿಸ್ಟ್ – ನಟ, ಸಾಯಿ ಕುಮಾರ್ ತಾವು ಸಂತೋಷ್ ಆನಂದ್ ರಾಮ್  ನಿರ್ದೇಶನದ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ”ದಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಧನ್ವೀರ್ ಅವರ ಜನ್ಮದಿನದಂದು “ಬಂಪರ್” ಚಿತ್ರತಂಡ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಇದು ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಸುಪ್ರೀತ್ ಅವರ ನಿರ್ಮಾಣದ ಎರಡನೇ ಚಿತ್ರವಿದಾಗಿದ್ದು “ಭರಾಟೆ” ನಂತರ ಇದೀಗ “ಬಂಪರ್” ಅವರಿಗೆ ಅದೃಷ್ಟ ತಂದುಕೊಡಲಿದೆಯೆ ಎಂದು ಕಾದು ನೋಡಬೇಕಿದೆ. 

ಜನವರಿ 15 ರಂದು ಭರ್ಜರಿಯಾಗಿ ಮಹೂರ್ತ ಆಚರಿಸಿಕೊಂಡಿದ್ದ “ಬಂಪರ್” ಕಮರ್ಷಿಯಲ್ ಎಂಟರ್ಟೈನರ್ ಚಿತ್ರವಾಗಿದ್ದು ಚಿತ್ರಕ್ಕೆ ನಾಯಕಿಯ ಆಯ್ಕೆ ಅಂತಿಮ ಹಂತದಲ್ಲಿದ್ದು ಉಳಿದ ಪಾತ್ರವರ್ಗ ಆಯ್ಕೆ ಆದ ನಂತರ ನವೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಚಿತ್ರಕ್ಕೆ  ಸಂಗೀತ ಸಂಯೋಜಕರಾಗಿ ಅಜನೀಶ್ ಬಿ ಲೋಕನಾಥ್ ಮತ್ತು ಮುಫ್ತಿ ಛಾಯಾಗ್ರಾಹಕ  ನವೀನ್ ಕುಮಾರ್ ಈ ಚಿತ್ರಕ್ಕೆ ಕ್ಯಾಮರಾ ಕೆಲಸ ನಿರ್ವಹಿಸಲಿದ್ದಾರೆ.