ಚಾಮರಾಜನಗರದಲ್ಲಿ “ಬಹದ್ದೂರ್ ಗಂಡು” ಚಿತ್ರದ ಮುಹೂರ್ತ

ಚಿತ್ರದ ನಾಯಕ ನಟರಾಗಿ ಕಿರಣ್ ರಾಜು, ನಾಯಕಿ ನಟಿಯಾಗಿ ಯಶ ಶಿವಕುಮಾರ್

ಚಾಮರಾಜನಗರ, ಮಾ.22- ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ ಕ್ಲಾಪ್ ಮಾಡುವ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಬಹದ್ದೂರ್ ಗಂಡು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು. ಚಿತ್ರದ ಮುಹೂರ್ತ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಡಿವೈಎಸ್ ಪಿ ಪ್ರಿಯದರ್ಶಿನಿ ಈ ಸಾಣೆಕೊಪ್ಪ ಚಿತ್ರ ತಂಡಕ್ಕೆ ಶುಭಾಶಯ ಕೋರಿದರು. ಶಕ್ತಿ ಕೇಂದ್ರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದ್ದೀರಿ ಚಿತ್ರವು ಯಶಸ್ಸು ಕಾಣಲಿದೆ ಎಂದು ಹೇಳಿದರು.

ಪ್ರಸಿದ್ದ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಚಿತ್ತೀಕರಣವು ಚಾಮರಾಜನಗರ ಜಿಲ್ಲೆಯ ಆಯ್ದಸ್ಥಳಗಳಾದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರು, ವಡ್ಡಗೆರೆ, ಸತ್ತಿಗಾಲ ಇತರೆ ಸ್ಥಳಗಳಲ್ಲಿ 30 ದಿನಗಳವರಗೆ ಚಿತ್ರೀಕರಣ ಮಾಡಲಾಗುತ್ತದೆ. ಈ ಚಿತ್ರವು ಕಮರ್ಷಿಯಲ್ ಆಗಿದ್ದು ಗ್ರಾಮೀಣ ಸೊಗಡು ಒಳಗೊಂಡಿದೆ. ಒಂದು ಹಳ್ಳಿಯ ನೂರು ವರ್ಷದ ಇತಿಹಾಸವನ್ನು ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ನಿರ್ದೇಶಕ ಪ್ರಸಿದ್ದು ತಿಳಿಸಿದರು.

ಚಿತ್ರದ ನಾಯಕ ನಟರಾಗಿ ಕಿರಣ್ ರಾಜು, ನಾಯಕಿ ನಟಿಯಾಗಿ ಯಶ ಶಿವಕುಮಾರ್, ನಿಸರ್ಗ ಲಕ್ಷ್ಮಣ್, ಚಿತ್ರದ ಛಾಯಾಗ್ರಾಹಣ ಚಾಮರಾಜನಗರದ ಕಿಟ್ಟಿಕೌಶಿಕ್ ನಿರ್ವಹಿಸಿದ್ದಾರೆ. ಮಳ್ಳವಳ್ಳಿ ಸಾಯಿಕೃಷ್ಣರ ಅವರ ಸಂಭಾಷಣೆ ಇದೆ. ತಾರಾ ಬಳಗದಲ್ಲಿ ಕರಿಸುಬ್ಬು, ನಾಗೇಶ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ರಮೇಶ್ ಭಟ್, ಚಾಮರಾಜನಗರ ಮಂಜುಗಾಳಿಪುರ ಗ್ರಾಮದ ಮುಖಂಡ ಪಾತ್ರದಲ್ಲಿ ಮಿಂಚಲಿದ್ದಾರೆ ಇನ್ನೂ ಅನೇಕ ಹೆಸರಾಂತ ಕಲಾವಿದರು ನಟಿಸಲಿದ್ದಾರೆ ಎಂದು ನಿರ್ದೇಶಕ ಪ್ರಸಿದ್ ತಿಳಿಸಿದರು