ಅಮೆಜಾನ್ ನಲ್ಲಿ ‘ ನಳ ಮಹಾರಾಜ’ ಅದರ ಜತೆಗೆ ‘ ಮನೆ ನಂ 13’ ಕೂಡ ತೆರೆಗೆ
ಅನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಇತ್ತೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎನ್ನುವ ಆಕ್ಷೇಪಗಳ ನಡುವೆಯೇ ಅಮೆಜಾನ್ ಪ್ರೈಮ್ ಗೆ ಕನ್ನಡ ಸಿನಿಮಾಗಳು ನೇರವಾಗಿ ಲಗ್ಗೆ ಇಡುತ್ತಿವೆ. ಸದ್ಯಕ್ಕೀಗ ಹಲವು ಸಿನಿಮಾಗಳು ಮಾತುಕತೆ ಹಂತದಲ್ಲಿವೆ ಎನ್ನುವ ಶುಭ ಸುದ್ದಿಯ ನಡುವೆಯೇ ನಿರೀಕ್ಷಿತ ಎರಡು ಸಿನಿಮಾಗಳು ಡೈರೆಕ್ಟ್ ಆಗಿ ಅಮೆಜಾನ್ ಪ್ರೈಮ್ ಮೂಲಕ ಬಿಡುಗಡೆ ಆಗುತ್ತಿರುವುದು ಕನ್ಫ ರ್ಮ್ ಆಗಿದೆ. ಪುಷ್ಕರ್ ಮಲ್ಲಿಕಾರ್ಜುನ್, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ನಿರ್ಮಾಣದ ‘ ಭೀಮಸೇನ ನಳ ಮಹಾರಾಜ ‘ ಹಾಗೂ ಸ್ವರ್ಣಾಲತಾ ಪ್ರೊಡಕ್ಷನ್ ನ ‘ಮನೆ ನಂ13 ‘ ಚಿತ್ರಗಳೆರೆಡು ನೇರವಾಗಿ ಅಮೆಜಾನ್ ಪ್ರೈಮ್ ಮೂಲಕ ತೆರೆ ಕಾಣುತ್ತಿವೆ.

ಪುಷ್ಕರ್ ಫಿಲಂಸ್ ನಿರ್ಮಾಣದ ‘ ಭೀಮಸೇನ ನಳಮಹಾರಾಜ ‘ ಚಿತ್ರೀಕರಣಗೊಂಡೇ ಹಲವು ದಿನ ಕಳೆದಿದೆ. ಹೆಚ್ವು ಕಡಿಮೆ ಎರಡು ವರ್ಷಗಳೆ ಆಗಿವೆ. ತಾಂತ್ರಿಕ ಕಾರಣದಿಂದ ಬಿಡುಗಡೆ ತಡವಾಗಿದ್ದ ಚಿತ್ರಕ್ಕೀಗ ಅನ್ ಲೈನ್ ಮೂಲಕ ತೆರೆ ಕಾಣುವ ಸೌಭಾಗ್ಯ ಸಿಕ್ಕಿದೆ. ಅಕ್ಟೋಬರ್ 29 ಕ್ಕೆ ಅಮೆಜಾನ್ ನಲ್ಲಿ ನೋಡಲು ಲಭ್ಯವಾಗಲಿದೆ. ಉಳಿದಂತೆ ಅನೇಕ ಕಾರಣಕ್ಕೆ ಕುತೂಹಲ ಮೂಡಿಸಿದ ಚಿತ್ರವಿದು.ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಆಹಾರ ಪದಾರ್ಥಕ್ಕೆ ಸಂಬಂಧಿಸಿದ ಚಿತ್ರ. ಕತೆ ಆ ಮಟ್ಟಿಗೆ ಕುತೂಹಲಿತವೇ. ಇನ್ನು ಇದರ ನಿರ್ದೇಶಕ ಕಾರ್ತಿಕ್ ಸರಗೂರು ಜಿರ್ಜಿಂಬೆ ಚಿತ್ರದ ಮೂಲಕರಾಜ್ಯ ಪ್ರಶಸ್ತಿ ಪಡೆದವರು.ಅವರು ಇಲ್ಲಿ ಒಂದು ಪ್ರತಿಷ್ಟಿತ ಸಂಸ್ಥೆಯ ಜತೆಗೂಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ, ಆರೋಹಿ ನಾರಾಯಣ್, ಅರವಿಂದ್ ಅಯ್ಯರ್, ಪ್ರಿಯಾಂಕಾ ತಿಮ್ಮೇಶ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಸದ್ಯಕ್ಕೆ ಅಮೆಜಾನ್ ಗೆ ಈ ಚಿತ್ರ ಎಷ್ಟು ಮೊತ್ತಕ್ಕೆ ಸೇಲ್ ಆಯ್ತ, ಸೇಲ್ ಅಗ್ರಿಮೆಂಟ್ ಹೇಗೆ ಎನ್ನುವುದು ನಿಗೂಢ. ಆದರೆ ನಿರ್ಮಾಪಕರಿಗೆ ಹಾಕಿದ ಬಂಡವಾಳ ಕೈ ಸೇರಿರುವ ಎಲ್ಲಾ ಸಾಧ್ಯತೆಗಳು ಇವೆ. ಅದೇ ರೀತಿ ಸ್ವರ್ಣಲತಾ ಪ್ರೊಡಕ್ಷನ್ ಹೌಸ್ ನ ಮನೆನಂ13 ಕೂಡ ನಿರೀಕ್ಷಿತ ಸಿನಿಮಾ. ಇದು ನವೆಂಬರ್ 19 ಕ್ಕೆ ಬಿಡುಗಡೆ ಆಗುತ್ತಿದೆ.
