ಡೆಡ್ಲಿ ಕಾಂಬಿನೇಷನ್ “ಆದಿತ್ಯ & ಪ್ರಕಾಶ್ ಹೆಬ್ಬಾಳ”

“ಹಫ್ತಾ” ಎಂಬ ಚಿತ್ರದಿಂದ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಪ್ರಕಾಶ್ ಹೆಬ್ಬಾಳ ರವರು ಡೆಡ್ಲಿ ಖ್ಯಾತಿಯ ಆದಿತ್ಯ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಆ್ಯಕ್ಷನ್, ಥ್ರಿಲ್ಲರ್ ಸಿನಿಮಾವಾಗಿದ್ದು ಮನರಂಜನೆ ಜೊತೆಗೆ ಕ್ಯೂರಿಯಾಸಿಟಿ ಹುಟ್ಟಿಸುವಂತಹ ಚಿತ್ರಕಥೆ ಇದ್ದು… ಪ್ರತಿಯೊಂದು ಪಾತ್ರಗಳು ವಿಶೇಷತೆಯಿಂದ ಕೂಡಿರುತ್ತವೆ. ಸದ್ಯಕ್ಕೆ ಚಿತ್ರತಂಡ ಕಥೆ, ಚಿತ್ರಕಥೆ ಹಾಗೂ‌ ಸಂಭಾಷಣೆ ಕೆಲಸಗಳಲ್ಲಿ ನಿರತರಾಗಿದ್ದು, ಇಷ್ಟರಲ್ಲಿಯೇ ಸಿನಿಮಾ‌‌‌ ಸೆಟ್ಟೇರುವುದು ಖಚಿತವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸೋಷಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದು ಸಿ ಎಚ್ ಬಿ ಕಂಬೈನ್ಸ್ ಮೂಲಕ‌ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ “ಸಂಗೀತ ರಾಜು” ಅವರ ಸಂಗೀತವಿದೆ. Dr. ನಾಗೇಂದ್ರ ಪ್ರಸಾದ್, ರವಿವರ್ಮ, ಕವಿರಾಜ್, ವೆಂಕಿ ಯುಡಿವಿ ಇನ್ನು ಮುಂತಾದ ಅನುಭವಿ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.