ACT-1978 ಸಿನೆಮಾದ ಹಾಡು ಬಿಡುಗಡೆ

ಡಾ. ಶಿವರಾಜ್‌ಕುಮಾರ್ ಸರ್ ಅವರು ಬಿಡುಗಡೆ ಮಾಡಲಿರುವ ನಮ್ಮ ACT-1978 ಸಿನೆಮಾದ ಹಾಡು ಅಕ್ಟೋಬರ್ 25-10-2020 ರ ಸಂಜೆ ಆರು ಘಂಟೆಗೆ ‘ಪಿಆರ್‌ಕೆ’ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಪ್ರೇಕ್ಷಕ ಪ್ರಭುಗಳ ವೀಕ್ಷಣೆಗೆ ಲಭ್ಯವಿರುತ್ತದೆ.. ಇದು ಕರ್ನಾಟಕ ವಿವಿದ ಜಿಲ್ಲೆಗಳಲ್ಲಿ ಚಿತ್ರೀಕರಿಸಿರುವ ಹಾಗೂ ಕರ್ನಾಟಕದ ಜನಸಾಮಾನ್ಯರು ಹಾಗೂ ವಿಶೇಷವಾಗಿ ರೈತರೇ ಕಾಣಿಸಿಕೊಂಡಿರುವ ಹಾಡಿದು. ಹತಾಷೆ, ಸಾಲ, ಕಷ್ಟಗಳಲ್ಲಿ ಸಿಲುಕಿಕೊಂಡಿರುವ ದೇಶದ ರೈತರು ಹಾಗೂ ಸಾಮಾನ್ಯ ಪ್ರಜೆಗಳಿಗೆ ನಮ್ಮ ಸಿನೆಮಾ ಪರವಾಗಿ ಈ ಹಾಡು ಅರ್ಪಣೆ. ನಿಮ್ಮೆಲ್ಲರ ಸಹಕಾರ, ಬೆಂಬಲವಿರಲಿ. ಹಾಡಿನ ಸಾಹಿತ್ಯ – ಜಯಂತ್ ಕಾಯ್ಕಿಣಿ, ಸಂಗೀತ ಸಂಯೋಜನೆ – ರಾಹುಲ್ ಶಿವಕುಮಾರ್, ಗಾಯನ – ಕಡಬಗೆರೆ ಮುನಿರಾಜು.ಛಾಯಾಗ್ರಹಣ – ಸತ್ಯ ಹೆಗಡೆ