Friday, March 5, 2021
WEBSITE LOGO

ಸ್ನೇಹಿತರೇ ನಾನು ನಿಮ್ಮ ಪ್ರೀತಿಯ ವೆಂಕಟೇಶ್ ಯು.ಡಿ.ವಿ…ಅಂತರ್ಜಾಲದಲ್ಲಿ ಈಗಾಗಲೇ ರಾಶಿ ರಾಶಿ ಮಾಹಿತಿಗಳಿದ್ದರೂ ನಾನೇಕೆ ಈ ಹೊಸ ವೆಬ್ ಪೇಜ್ ಹೊರತರುವ ಸಾಹಸಕ್ಕೆ ಇಳಿದೆ ಅಂತ ಅನೇಕರಿಗೆ ಆಶ್ಚರ್ಯ ಆಗಿರಬಹುದು…ಮೊದ ಮೊದಲು ನನಗೂ ಇದೇ ಭಾವನೆ ಮನಸ್ಸಲ್ಲಿ ಮೂಡಿತ್ತು ಆದರೆ ವೆಬ್ ಸೈಟ್ ಕಲ್ಪನೆ ಹಗಲಿರುಳೂ ನನ್ನನ್ನು ಕಾಡುತ್ತಿತ್ತು…ನನ್ನ ಕಲ್ಪನೆಯ ಶಿಲ್ಪವಾದ “ಕನ್ನಡ ಗೋಲ್ಡ್ ಫ್ರೇಮ್ಸ್” ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ತೇನೆ… ಒಬ್ಬ ಸಂಕಲನಕಾರನಾಗಿ ನಾನು ಅನೇಕ ಪ್ರತಿಭಾವಂತ ಕ್ರಿಯೇಟಿವ್ ವ್ಯಕ್ತಿಗಳ ಜೊತೆ ಹೆಚ್ಚು ಸಮಯ ಕಳೀತೀನಿ…ಅವರಲ್ಲಿ ನಟ/ನಟಿಯರು, ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಮತ್ತಿತರೆ ಸಿನೆಮಾ ತಂತ್ರಜ್ಞರಿರ್ತಾರೆ…ಮೊದಲನೆಯದಾಗಿ ಸಿನೆಮಾ ನಿರ್ಮಾಣದ ಸಂದರ್ಭದಲ್ಲಿ ನಾವು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ ಅಂದರೆ ಸಿನೆಮಾ ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು, ಹೊಸ ಚಿತ್ರಗಳ ಬಿಡುಗಡೆ, ಚಿತ್ರೀಕರಣ ಸಮಯದಲ್ಲಿ ಘಟಿಸಿದ ಆಸಕ್ತಿಕರ ಮತ್ತು ಹಾಸ್ಯಪೂರ್ಣ ಸನ್ನಿವೇಶಗಳು ಇತ್ಯಾದಿ…ನನಗೆ ಇಂಥಹ ಹಲವಾರು ಘಟನೆಗಳನ್ನ ವೆಬ್ ಸೈಟ್ ಮೂಲಕ ತಲುಪಿಸೋದು ಆಸಕ್ತಿಕರ ಮತ್ತು ಅಮೂಲ್ಯವಾದವು ಅನ್ನಿಸ್ತು…ಎರಡನೆಯದಾಗಿ ತಾಳ್ಮೆ,ಶ್ರದ್ಧೆ, ಏಕಾಗ್ರತೆ ಮತ್ತು ಇನ್ನೂ ಕಲಿಯಬೇಕೆಂಬ ತುಡಿತಗಳಿದ್ದವರು ತಮಗೆ ಆಸಕ್ತಿ ಇರುವ ವಿಷಯದಲ್ಲಿ ಪಾಂಡಿತ್ಯ ಸಾಧಿಸಬುದೆಂದು ಒಬ್ಬ ತಂತ್ರಜ್ಞನಾಗಿ ನಾನು ಗಾಢವಾಗಿ ನಂಬುತ್ತೇನೆ…ನನ್ನ ಈ ತಾಂತ್ರಿಕತೆಯ ಪಯಣದಲ್ಲಿ ಆಕಸ್ಮಿಕವಾಗಿ ಅಥವಾ ಅನುಭವದಿಂದ ಯಾವುದಾದರೂ ಹೊಸ ತಂತ್ರವನ್ನ ಕಂಡುಹಿಡಿದಾಗಲೆಲ್ಲ ಅಂದುಕೊಳ್ತೀನಿ, ಯಾರಾದರೂ ನಾನು ಕಲಿಯುತ್ತಿದ್ದ ಸಮಯದಲ್ಲಿ ಇವುಗಳನ್ನೆಲ್ಲ ಕಲಿಸಿದ್ದರೆ ಇದುವರೆಗೂ ನಾನು ಮಾಡಿದ ಎಷ್ಟೋ ಚಿತ್ರಗಳನ್ನು ಮತ್ತಷ್ಟು ತಾಂತ್ರಿಕವಾಗಿ ಶ್ರೀಮಂತಗೊಳಿಸಬಹುದಿತ್ತು ಅಂತ…ಆದ್ದರಿಂದ ನನ್ನ ಈ ಮಹತ್ವಾಕಾಂಕ್ಷೆಯ ವೆಬ್ ಸೈಟ್ ಮೂಲಕ ಕಲಿಕಾ ತರಗತಿಗಳನ್ನು ನಡೆಸಬೇಕೆಂದು ಆಶಿಸಿದ್ದೇನೆ…ಕನ್ನಡ ಚಲನಚಿತ್ರರಂಗದಲ್ಲಿ ನನ್ನ ಇದುವರೆಗಿನ ಪ್ರಯಾಣದಲ್ಲಿ ನಾನು ಕಲಿತ ಹಲವಾರು ಅತ್ಯುತ್ತಮ ವಿಚಾರಗಳನ್ನು ಮುಂಬರುವ ಯುವ ತಂತ್ರಜ್ಞರಿಗೂ ಹೇಳಿಕೊಡಬೇಕೆಂಬ ಹಂಬಲ ನನ್ನದು…ಇದರೊಟ್ಟಿಗೆ ಹೊಸ ಚಿತ್ರಗಳ ನಿರ್ಮಾಣ, ಬಿಡುಗಡೆ,ಟ್ರೇಲರ್ಸ್,ಲಿರಿಕಲ್ ವಿಡಿಯೊ ಹೀಗೆ ನೀವು ವೆಬ್ ಸೈಟ್ www.kannadagoldframes.com ಪೇಜಿಗೆ ಭೇಟಿ ಕೊಟ್ಟಾಗ ಇನ್ನೂ ಅನೇಕ ವಿಚಾರಗಳು ನಿಮಗೆ ನೋಡಲು ಸಿಗುತ್ತದೆ… ದಯವಿಟ್ಟು ವೆಬ್ ಸೈಟಿಗೆ ಲಾಗಿನ್ ಮಾಡಿ ನೋಡಿ ನಿಮ್ಮ ಅಭಿಪ್ರಾಯಗಳನ್ನ ಮರೆಯದೆ ನನಗೆ ಬರೆದು ಕಳಿಸಿ ಅದರಿಂದ ಈ ನನ್ನ ವೆಬ್ ಸೈಟ್ ಅನ್ನು ಇನ್ನೂ ಉತ್ತಮಪಡಿಸಲು ನೆರವು ನೀಡಿದಂತಾಗುತ್ತದೆ…