ಮಾಸಾಂತ್ಯಕ್ಕೆ ಎಸ್.ವಿ.ಪ್ರೊಡಕ್ಷನ್ಸ್ ನಿರ್ಮಾಣದ ಅದ್ದೂರಿ ತೆಲುಗು ಚಿತ್ರ‌ ತೆರೆಗೆ.

ಅನೂಪ್ ರುಬೆನ್ಸ್ ಸಂಗೀತ ನೀಡಿದ್ದು, ‘ನೀಲಿ ನೀಲಿ ಆಕಾಶ’ ಹಾಡು ಈಗಾಗಲೇ 300 M ವೀಕ್ಷಣೆಗೊಂಡು ದಾಖಲೆ ನಿರ್ಮಿಸಿದೆ.

ಕನ್ನಡ ಚಿತ್ರರಂಗದಲ್ಲಿ 17 ಚಿತ್ರಗಳನ್ನು ನಿರ್ಮಿಸಿರುವ, ತೆಲುಗಿನಲ್ಲೂ ಈಗಾಗಲೇ ಎರಡು ಚಿತ್ರಗಳ ನಿರ್ಮಾಣ ಮಾಡಿರುವ ನಿರ್ಮಾಪಕ ಎಸ್.ವಿ.ಬಾಬು ಅವರು ತಮ್ಮ ಎಸ್.ವಿ.ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿರುವ “30 ರೊಜುಲಾ ಪ್ರೇಮಿಚದಂ ಎಲಾ?” ತೆಲುಗು ಚಿತ್ರ ಜನವರಿ 29 ರಂದು ಬಿಡುಗಡೆಯಾಗಲಿದೆ.

ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 400 ಹಾಗೂ ಕರ್ನಾಟಕದಲ್ಲಿ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ MUನ್ನಾ‌ ಈ ಚಿತ್ರ ನಿರ್ದೇಶಿಸಿದ್ದಾರೆ.
ಅನೂಪ್ ರುಬೆನ್ಸ್ ಸಂಗೀತ ನೀಡಿದ್ದು, ‘ನೀಲಿ ನೀಲಿ ಆಕಾಶ’ ಹಾಡು ಈಗಾಗಲೇ 300 M ವೀಕ್ಷಣೆಗೊಂಡು ದಾಖಲೆ ನಿರ್ಮಿಸಿದೆ.

ಖ್ಯಾತ ನಿರೂಪಕ ಪ್ರದೀಪ್ ಮಾಚಿರಾಜು ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ.‌ ಬೆಂಗಳೂರಿನ ಅಮೃತ ಅಯ್ಯರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸಾಕಷ್ಟು ಅನುಭವಿ ಕಲಾವಿದರು ಅಭಿನಯಿಸಿದ್ದಾರೆ.