23 YEARS D BOSS ಸಿನಿ ಜರ್ನಿ

ನಿರ್ಮಾಪಕರ “ಬಾಕ್ಸ್ ಆಫೀಸ್ ಸುಲ್ತಾನ್” ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಕನ್ನಡ ಚಿತ್ರರಂಗದ ಪ್ರಮುಖ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ 53 ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.

2002 ರಲ್ಲಿ ಪಿ.ಎನ್ ಸತ್ಯ ನಿರ್ದೇಶನದ “ಮೆಜೆಸ್ಟಿಕ್” ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದು ಕರ್ನಾಟಕದ ಹಲವು ಸಿನಿಮಾ ಮಂದಿರಗಳಲ್ಲಿ ಶತದಿನ ಪೂರೈಸಿತು. 2003 ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ “ಕರಿಯ” ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು 800 ದಿನಗಳಿಗೂ ಹೆಚ್ಚು ದಿನ ಪ್ರದರ್ಶನ ಕಂಡು ದಾಖಲೆ ಬರೆಯಿತು.

ನಂತರ ಬಂದ ಕಲಾಸಿಪಾಳ್ಯ 250 ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿತು. ಇಲ್ಲಿಂದ ದರ್ಶನ್-ರಕ್ಷಿತಾ ಜೋಡಿ ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿತು.

2007 ರಲ್ಲಿ ಉಪೇಂದ್ರರ ಜೊತೆ “ಅನಾಥರು” ಚಿತ್ರದಲ್ಲಿ ನಟಿಸಿ ಅದೇ ವರ್ಷ “ಈ ಬಂಧನ” ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಪುತ್ರನ ಪಾತ್ರದಲ್ಲಿ ನಟಿಸಿದರು. ಕುಚಿಕು ಗೆಳಯರಾದ `ಅಂಬಿ-ವಿಷ್ಣು’ರ ಪುತ್ರನ ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಾಯಕನಟ ದರ್ಶನ್ ಎನ್ನಬಹುದು.

ದರ್ಶನ್ ರವರ ಇಪ್ಪತ್ತ್ಮೂರು ವರ್ಷದ ಸಿನಿ ಜರ್ನಿಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದಂತಾ ಚಿತ್ರಗಳು  ಮೆಜೆಸ್ಟಿಕ್, ದಾಸ ,ಅಯ್ಯ , ಧರ್ಮ, ದತ್ತ , ನನ್ನ ಪ್ರೀತಿಯ ರಾಮು, ಸ್ವಾಮಿ, ಅನಾಥರು , ಲಾಲಿ ಹಾಡು, ಶಾಸ್ತ್ರಿ, ಸುಂಟರಗಾಳಿ. ಕಲಾಸಿಪಾಳ್ಯ, ನವಗ್ರಹ, ಪೊರ್ಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಗಜ , ಸಾರಥಿ, ಜಗ್ಗುದಾದ, Mr ಐರಾವತ, ಕುರುಕ್ಷೇತ್ರ, ಯಜಮಾನ , ಹೀಗೆ ಮುಂತಾದವು.

ಇನ್ನು  ತೆರೆಗೆ ಬರಲು ಸಜ್ಜಾಗಿರುವ ರಾಬರ್ಟ್ ಚಿತ್ರವು ಪೋಸ್ಟರ್ ಮತ್ತು ಸಾಂಗ್ಸ್ ಗಳ ಮೂಲಕ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ  ಹುಟ್ಟಿಸಿದೆ. ಹಾಗೆ  ಚಿತ್ರೀಕರಣ ಹಂತದಲ್ಲಿರುವ “ರಾಜವೀರ ಮದಕರಿ ನಾಯಕ” ಚಿತ್ರವು ಕರೊನಾ ಕಾರಣದಿಂದ ಮುಂದೂಡಲ್ಪಟ್ಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 23 ವರ್ಷದ ಸಿನಿಜರ್ನಿಯು ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು “ಕನ್ನಡ ಗೋಲ್ಡ್ ಫ್ರೇಮ್ ” ಹಾರೈಸುತ್ತದೆ.