ಚಿತ್ರರಂಗಕ್ಕೆ 100%ಲಕ್

ಕಂಡ ಕನಸು ಭಂಡ ಮನಸು

ಇತ್ತೀಚೆಗೆ ಉತ್ತರ ಕರ್ನಾಟಕದ ಅನೇಕ ಪ್ರತಿಭೆಗಳು ಸಿನಿ ಪ್ರಿಯರ ಗಮನ ಸೆಳೆಯುತ್ತಿವೆ.
ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಒಂದು ಹೊಸ ಚಿತ್ರತಂಡವು. ಶ್ರೀ ವಜ್ರಹನುಮಾನ್ ಕ್ರಿಯೇಷನ್ಸ್ ಎಂಬ ಬ್ಯಾನರ್ ಅಡಿಯಲ್ಲಿ, 100%ಲಕ್ ಎಂಬ ಶೀರ್ಷಿಕೆಯೊಂದಿಗೆ ಚಿತ್ರೀಕರಣ ಪೂರ್ಣಗೊಳಿಸಿದೆ.

ಚಿತ್ರಕ್ಕೆ ಯುವ ನಿರ್ದೇಶಕ ಅಮೀತ್ ರೇಡೆ ಆಕ್ಷನ್ ಕಟ್ ಹೇಳಿದ್ದು, ನಿರ್ಮಾಪಕರಾದ ಗುರುರಾಜ್ ಎಸ್ ಚಿತ್ರರಂಗಕ್ಕೆ ಹೊಸಬರಾಗಿರುವುದರಿಂದ ನಿರ್ಮಾಣದ ಜವಾಬ್ದಾರಿಯನ್ನು ಕೂಡ ನಿರ್ದೇಶಕರೇ ಹೊತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಅಮಿತ್ ರೇಡೆ, ಈ ಚಿತ್ರವು ಒಂದು ಕಾಲ್ಪನಿಕ ಸತ್ಯ ಘಟನೆಯ ಆಧಾರಿತ ಎಂದು ಹೇಳಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ.ಹೊಸ ಪ್ರತಿಭೆಗಳಾದ ನಾಯಕ ನಾಯಕಿ ಹಾಗು ಗೋವಿಂದೇಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಸಧ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸೆನ್ಸಾರ್ ಸರ್ಟಿಫಿಕೇಟ್ಗೆ ಕಾಯುತ್ತಿದ್ದಾರೆ.
ಚಿತ್ರಕ್ಕೆ ಮಂಗಳೂರಿನವರಾದ ಲಾಯ್ ವ್ಯಾಲೆಂಟೈನ್ ಸಲ್ದಾನ ಅವರು ಸಂಗೀತ ನೀಡಿದ್ದು, ಛಾಯಾಗ್ರಾಹಕರಾದ ಎಂ, ಎಸ್ ರಾಜು, ಹಾಗು ವೆಂಕಿ ಯು ಡಿ ವಿ ಅವರ ಸಂಕಲನದ ಕೈ ಚಳಕವನ್ನ ಕಾಣಬಹುದು.
ನಿರ್ದೇಶಕರು ಹೇಳುವ ಪ್ರಕಾರ ಚಿತ್ರದ ಎಲ್ಲಾ ಹಾಡುಗಳು ಚನ್ನಾಗಿ ಮೂಡಿಬಂದಿದ್ದು ಸಧ್ಯದಲ್ಲೇ ಧ್ವನಿಸುರುಳಿ ಬಿಡುಗಡೆಗೆ ಸಿದ್ಧವಾಗ್ತಿರೋದಾಗಿ ಹೇಳಿದ್ದಾರೆ.